ಸೋಮವಾರ, ಏಪ್ರಿಲ್ 19, 2021
25 °C

ಮರಪಳ್ಳಿ: ಭಕ್ತರ ಪೂರ್ಣಕುಂಭ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಮರಪಳ್ಳಿ ಗ್ರಾಮದ ಆರಾಧ್ಯ ದೇವ ಪಾಂಡುರಂಗ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಸುಶೀಲಮ್ಮಾ ತಾಯಿ ಅವರು ಕೈಗೊಂಡ ಒಂದು ತಿಂಗಳ ಮೌನ ಅನುಷ್ಠಾನವನ್ನು ಭಾನುವಾರ ಸಂಪನ್ನಗೊಳಿಸಲಾಯಿತು.ಅನುಷ್ಠಾನ ಮಹಾಮಂಗಲ ಕಾರ್ಯಕ್ರಮಕ್ಕೆ ಸುಶೀಲಮ್ಮಾ ತಾಯಿಯ ಗುರುಗಳಾದ ನಿಂಗೋಳ್ ಆಶ್ರಮದ ಶಾಂತಿಬಾಬಾ ಮಹಾರಾಜರು ಆಗಮಿಸಿ ಆಶೀರ್ವಚನ ನೀಡಿ, `ಸುಶೀಲಮ್ಮಾ ತಾಯಿ ಮರಪಳ್ಳಿ ಗ್ರಾಮಕ್ಕೆ ಬಂದ ಮೇಲೆ ಪವಿತ್ರ ಕ್ಷೇತ್ರ ನಾಗಲಿಂಗೇಶ್ವರ ದೇವಾಲಯದ ಅಭಿವೃದ್ಧಿಯತ್ತ ಸಾಗಿದೆ. ಇದಕ್ಕೆ ತಾಯಿಯ ಆಶೀರ್ವಾದವೇ ಕಾರಣ~ ಎಂದರು.ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಗ್ರಾಮ ಮುಖಂಡರಾದ ಶಾಮರಾವ್ ಕಾಡವಾದ್, ಈರಪ್ಪಾ ದೇವಗಿರಿ, ನಾಗಶೆಟ್ಟಿ ಶಂಕರ, ಗಣಪತಿ  ಹಡಪದ, ಭೀಮಶಾ ಜಮಾದಾರ, ವೀರಯ್ಯ ಸ್ವಾಮಿ, ಭೀಮಶೆಟ್ಟಿ ರಟಕಲ್, ಸಂಗಪ್ಪ ದೇವಗಿರಿ, ಕಾಶಿನಾಥ ಸುನಾರ್, ಶಾಂತಲಿಂಗಯ್ಯ ಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.