ಮರಳಿದ ಸೂಚ್ಯಂಕ; ಮತ್ತೆ ಹೂಡಿಕೆ ಉತ್ಸಾಹ

7

ಮರಳಿದ ಸೂಚ್ಯಂಕ; ಮತ್ತೆ ಹೂಡಿಕೆ ಉತ್ಸಾಹ

Published:
Updated:

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಹಿಂದಿನವಾರ 17,728 ಪಾಯಿಂಟುಗಳಲ್ಲಿ ಅಂತ್ಯಗೊಂಡಾಗ ಹೆಚ್ಚಿನ ವಿಶ್ಲೇಷಕರು ಸೂಚ್ಯಂಕದ ಕುಸಿತ ಇನ್ನಷ್ಟಿದೆ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪತ್ರಿಕೆಯವೊಂದು 16,500 ಪಾಯಿಂಟುಗಳಿಗೆ ಇಳಿಯಬಹುದೆಂಬ ಸುದ್ದಿಯು ಹೂಡಿಕೆದಾರರನ್ನು ಭೀತಿಯಲ್ಲಿ ಕೆಡವಿ, ಗೊಂದಲಕ್ಕೀಡು ಮಾಡಿತ್ತು.ಹಗರಣಗಳು ಬ್ಯಾಂಕ್ ಬಡ್ಡಿದರ ಹೆಚ್ಚಳ, ಹಣದುಬ್ಬರದ ನೆರಳು ಗಾಢವಾದ ಪ್ರಭಾವ ಬೀರಿದ್ದು ಪೇಟೆಗಳನ್ನು ‘ಮಂದಿ’ ವಾತಾವರಣಕ್ಕೆ ತಳಿದ್ದು, ಸೋಮವಾರದಂದು ದಿಢೀರನೆ ವಾತಾವರಣವು ಬದಲಾಗಿ ಭರ್ಜರಿ 473 ಪಾಯಿಂಟುಗಳ ಮುನ್ನಡೆಯೊಂದಿಗೆ ಇತರೆ ಸೂಚ್ಯಂಕಗಳ ಏರಿಕೆ ಎಲ್ಲಾ ನಕಾರಾತ್ಮಕ ಅಂಶಗಳನ್ನು ಬದಿಗೊತ್ತಿದವು. ಸೋಮವಾರದಿಂದ ಗುರುವಾರದವರೆಗೂ ಸುಮಾರು 777 ಪಾಯಿಂಟುಗಳ ಮುನ್ನಡೆ ಪ್ರದರ್ಶಿಸಿದ್ದಲ್ಲದೆ ಇದು ಬಜೆಟ್ ಮುನ್ನಾ ದಿನಗಳ ತೇಜಿ ಎಂಬ ಭಾವನೆ ಮೂಡಿಸಿತು. ಆದರೆ ಶುಕ್ರವಾರದಂದು ಕಂಡ 295 ಪಾಯಿಂಟುಗಳ ಕುಸಿತವು ತೇಜಿ ಸ್ವರೂಪವು ಕೇವಲ ಶೂನ್ಯ ಮಾರಾಟಗಾರರ ಕೊಳ್ಳುವಿಕೆ ಮತ್ತು ಬಹಳಷ್ಟು ಕುಸಿತ ಕಂಡಿದ್ದ ಪೇಟೆಯಲ್ಲಿ ಜಗ್ಗಿದ ಏರಿಕೆಯಾಗಿದ್ದು ತಾತ್ಕಾಲಿಕವೆಂದು ಪ್ರದರ್ಶಿಸಿದೆ. ಇಂತಹ ಈ ಏರುಪೇರಿನ ಪರಿಣಾಮ ಅಗ್ರಮಾನ್ಯ ಕಂಪೆನಿಗಳಾದ ಲಾರ್ಸನ್ ಅಂಡ್ ಟೋಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಜಿಂದಾಲ್ ಸ್ಟೀಲ್ ಅಂಡ್ ಪವರ್‌ಗಳಿಲ್ಲದೆ ಎಸ್ ಬ್ಯಾಂಕ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಎಜುಕಾಂಪ್ ಸೊಲೂಷನ್ಸ್, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಮುಂತಾದವು ಆಕರ್ಷಕ ಏರಿಕೆಯಿಂದ ವಿಜೃಂಭಿಸಿದವು. ಇದರೊಂದಿಗೆ ‘ಬಿ’ ಮತ್ತು ‘ಎಸ್’ ಗುಂಪಿನ ಉತ್ತಮ ಕಂಪೆನಿಗಳೂ ಸಹ ಆಕರ್ಷಕ ಮುನ್ನಡೆ ಪಡೆದವು ಕರೂರು ವೈಶ್ಯ ಬ್ಯಾಂಕ್ ಹಕ್ಕಿನ ಷೇರಿನ ನಂತರದ ಚಟುವಟಿಕೆಯಲ್ಲಿ ಕುಸಿದಿತ್ತು. ಒಂದೇ ವಾರದ ಅಂತರದಲ್ಲಿ ಷೇರುಗಳ ದರಗಳು ಭಾರಿ ಕುಸಿತದಿಂದ ದಿಢೀರ್ ಚೇತರಿಕೆ ಕಂಡು ಸ್ವಲ್ಪ ಇಳಿಕೆ ಕಂಡವು. ಇದು ಬದಲಾವಣೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ ಈಗಿನ ಪೇಟೆಗಳ ಫಲವನ್ನು ಅನುಭವಿ ಬಿಡದೆ, ಸದಾ ತಳಮಳಕ್ಕೆ ತಳ್ಳುತ್ತಲೇ ಇರುತ್ತವೆ.ವರ್ತಮಾನವನ್ನಾಧರಿಸಿದ ಚಟುವಟಿಕೆ ಸದಾ ಉತ್ತಮ. ಸೂಚ್ಯಂಕವು 482 ಪಾಯಿಂಟುಗಳ ಏರಿಕೆಯೊಂದಿಗೆ ಮಧ್ಯಮಶ್ರೇಣಿ ಸೂಚ್ಯಂಕವನ್ನು 185 ಪಾಯಿಂಟುಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 320 ಪಾಯಿಂಟುಗಳಷ್ಟು ಮುನ್ನಡೆಗೆ ಕಾರಣವಾಗಿತ್ತು. ವಿದೇಶೀ ವಿತ್ತೀಯ ಸಂಸ್ಥೆಗಳು ಸುಮಾರು  396 ಕೋಟಿ ರೂಪಾಯಿಗಳ ಖರೀದಿ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ. 72 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ಹಿಂದಿನವಾರದ ರೂ 62.97 ಲಕ್ಷ ಕೋಟಿಯಿಂದ ರೂ 64.75 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು.ಬೋನಸ್ ಷೇರಿನ ವಿಚಾರ

* ಹೆಕ್ಸಾವೇರ್ ಟೆಕ್ನಾಲಜೀಸ್ ಕಂಪೆನಿಯು ವಿತರಿಸಲಿರುವ 1:1ರ ಬೋನಸ್ ಷೇರಿಗೆ 25ನೇ ಫೆಬ್ರುವರಿ ನಿಗಧಿತ ದಿನಾಂಕವಾಗಿದೆ.

* ಭಂಡಾರಿ ಹೊಸೈರಿ ಎಕ್ಸ್‌ಪೋರ್ಟ್ಸ್ ಲಿ. ಕಂಪೆನಿಯು ವಿತರಿಸಲಿರುವ 7:2ರ ಅನುಪಾತದ ಬೋನಸ್‌ಗೆ ಫೆಬ್ರುವರಿ 25 ನಿಗದಿತ ದಿನವಾಗಿದೆ.ಲಾಭಾಂಶ ವಿಚಾರ

ಅವೆಂಟಿಸ್ ಫಾರ್ಮ ಶೇ 510 (ನಿಗಧಿತ ದಿನಾಂಕ 6.4.11) ಕಿಸಿಲ್ ಲಿ. ಶೇ. 250 ಕೋಲ್ ಇಂಡಿಯಾ ಶೇ. 35, (ನಿ.ದಿ. 21.2.11), ಡಿಐಸಿ ಇಂಡಿಯಾ ಶೇ. 40 (ನಿ.ದಿ. 19.4.11), ಎಲಾಂಟಸ್ ಬೆಕ್ ಇಂಡಿಯಾ ಶೇ. 45 (ನಿ.ದಿ. 13.4.11), ಗ್ಲಾಸ್ಕೊ ಸ್ಮಿತ್‌ಕ್ಲೈನ್ ಫಾರ್ಮ ಶೇ. 400 (ನಿ.ದಿ. 16.03.11), ಗುಜರಾತ್ ರಿಕ್ಲೆಂ ಅಂಡ್ ರಬ್ಬರ್ ಪ್ರಾಡಕ್ಟ್ಸ್ ಶೇ. 70, ಹ್ಯಾಟನ್ ಆಗ್ರೊ ಶೇ. 25 (ಮುಖಬೆಲೆ ರೂ2) ಇನ್ಯೊಸ್ ಎಬಿಎಸ್ ಶೇ. 40 (ನಿ.ದಿ. 25.04.11), ಹೀಲಿಯೋಸ್ ಅಂಡ್ ಮೆಥೆಸನ್ ಶೇ. 15, ನ್ಯಾಟ್ಕೊ ಫಾರ್ಮ ಶೇ. 20 (ನಿ.ದಿ. 25.02.11) ನೆಸ್ಲೆ ಇಂಡಿಯಾ ಶೇ. 125 (ನಿ.ದಿ. 26.4.11), ಪಿಎಸ್‌ಎಲ್ ಲಿ. ಶೇ. 20, ಥಾಮಸ್ ಕುಕ್ ಶೇ. 37.5 (ಮುಖಬೆಲೆ ರೂ 1).ಹಕ್ಕಿನ ಷೇರು ವಿತರಣೆ

* ಕರ್ನಾಟಕ ಬ್ಯಾಂಕ್ 2:5ರ ಅನುಪಾತದ, ಪ್ರತಿ ಷೇರಿಗೆ ರೂ 85 ರಂತೆ ವಿತರಿಸಲಿರುವ ಹಕ್ಕಿನ ಷೇರಿಗೆ ಫೆಬ್ರುವರಿ 28 ನಿಗದಿತ ದಿನವಾಗಿದ್ದು ವಿತರಣೆಯು ಮಾರ್ಚ್ 8 ರಿಂದ ಮಾರ್ಚ್ 22 ರವರೆಗೂ ತೆರೆದಿರುತ್ತದೆ.

* ನ್ಯೂ ಹರಿಜೋನ್ ಲೀಸಿಂಗ್ ಅಂಡ್ ಫೈನಾನ್ಸ್ ಕಂಪೆನಿಯು ರೂ. 100 ಕೋಟಿವರೆಗೂ ಸಂಪನ್ಮೂಲ ಸಂಗ್ರಹಣೆಗೆ ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದೆ.

* ಬ್ರಾಂಡ್ ರಿಯಆಲ್ಟಿ ಸರ್ವಿಸಸ್ ಕಂಪೆನಿಯು 19 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

* ಕ್ರಿಪ್ಟನ್ ಇಂಡಸ್ಟ್ರೀಸ್ ಕಂಪೆನಿಯು 18 ರಂದು ಹಕ್ಕಿನ ಷೇರು ಪರಿಶೀಲಿಸಿದೆ ವಿವರಗಳು ಲಭ್ಯವಿಲ್ಲ.ಮುಖಬೆಲೆ ಸೀಳಿಕೆ ವಿಚಾರ

* ಜಿಸಿವಿ ಸರ್ವಿಸಸ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ 2ಕ್ಕೆ ಸೀಳಲು 24ನೇ ಫೆಬ್ರುವರಿ ನಿಗದಿತ ದಿನವಾಗಿದೆ.

* ‘ಟಿ’ ಗುಂಪಿನ ನೌವೆಯು ಮಲ್ಟಿಮೀಡಿ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ ಸೀಳಲಿದೆ.

* ನಿಕ್ಕೊ ಪಾರ್ಕ್ಸ್ ಅಂಡ್ ರಿಸಾರ್ಟ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ 1ಕ್ಕೆ ಸೀಳಲು ಫೆಬ್ರುವರಿ 25 ನಿಗದಿತ ದಿನವಾಗಿದೆ.

* ಟನಿ ಟೆಕ್ಸ್‌ಟೈಲ್ಸ್ ಕಂಪೆನಿಯು 21 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.ಮುಖಬೆಲೆ ಕ್ರೋಡೀಕರಣ

* ಗುಜರಾತ್ ಮೆಟಾಲಿಕ್ ಕೋಲ್ ಅಂಡ್ ಕೋಕ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ. 100ಕ್ಕೆ ಕ್ರೋಡೀಕರಿಸಲು ಮಾರ್ಚ್ 7 ನಿಗದಿತ ದಿನವಾಗಿದೆ.ಬಂಡವಾಳ ಕಡಿತ

* ಹಿಂದೂಸ್ಥಾನ್ ಮೋಟಾರ್ಸ್ ಕಂಪೆನಿಯ ಬಂಡವಾಳವನ್ನು ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ 5ಕ್ಕೆ ಇಳಿಸುವ ಮೂಲಕ ಕಡಿತಗೊಳಿಸಿದ್ದು ಈ ಕಂಪೆನಿಯ ಷೇರು ಟಿ ಗುಂಪಿನಲ್ಲಿ 21 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಎನ್‌ರಿಚ್ ಇಂಡಸ್ಟ್ರೀಸ್ ಕಂಪೆನಿಯ ಷೇರು ಬಂಡವಾಳವನ್ನು ಶೇ. 73 ರಷ್ಟು ಕಡಿತಗೊಳಿಸಿದ ನಂತರ 18 ರಿಂದ ಟಿ. ಗುಂಪಿನಲ್ಲಿ ಬಿಡುಗಡೆಯಾಯಿತು ಪ್ರತಿ 100 ಷೇರಿಗೆ ಬದಲಾಗಿ 27 ಷೇರು ನೀಡಿ ಕಡಿತವನ್ನು ಜಾರಿಗೊಳಿಸಲಾಯಿತು.ಕಂಪೆನಿ ಹೆಸರಿನ ಬದಲಾವಣೆ

* ಮೈಫೇರ್ ಲೇಡಿ ಲಿ. ಕಂಪೆನಿ ಹೆಸರನ್ನು ಎಂಎಫ್‌ಎಲ್ ಇಂಡಿಯಾ ಲಿ. ಎಂದು ಬದಲಿಸಲಾಗಿದೆ.

* ಹಿಂದೂಸ್ಥಾನ್ ಕಾಂಟಿನೆಂಟಲ್ ಲಿ. ಕಂಪೆನಿ ಹೆಸರನ್ನು ಅಜುರ್ ಎಕ್ಸಿಮ್ ಸರ್ವಿಸಸ್ ಲಿ. ಎಂದು ಬದಲಿಸಲಾಗಿದೆ.

* ಟೆಲಿಡಟ ಇನ್‌ಫರ್ಮಟಿಕ್ಸ್ ಕಂಪೆನಿ ಹೆಸರನ್ನು ಅಗ್ನಿಟ ಎಜುಕೇಷನ್ ಲಿ. ಎಂದು ಬದಲಿಸಲಾಗಿದೆ.ವಾರದ ವಿಶೇಷ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೂ ಹತ್ತು ಸಾವಿರ ಕೋಟಿ ಮೊತ್ತದ ಟೈರ್ ‘2’ ಬಾಂಡ್‌ಗಳ ಮೂರನೇ ಮತ್ತು ನಾಲ್ಕನೇ ಸರಣಿಯಲ್ಲಿ ಹೂಡಿಕೆದಾರರಿಗೆ ಫೆಬ್ರುವರಿ 21 ರಿಂದ ಮಾಡಿದೆ. ವಿತರಣೆಯು 28 ರವರೆಗೂ ತೆರೆದಿರುತ್ತದೆ. ಇದರ ಪ್ರಕಾರ ಮೂರನೇ ಸರಣಿಯು 10 ವರ್ಷದ ಅವಧಿಯದಾಗಿದ್ದು ಶೇ. 9.75ರ ವಾರ್ಷಿಕ ಬಡ್ಡಿಯನ್ನು ಸಣ್ಣ ಹೂಡಿಕೆದಾರರಿಗೆ ನೀಡಲಾಗುವುದು. ರೀಟೆಲ್ ಹೂಡಿಕೆದಾರರಲ್ಲದವರಿಗೆ  ಶೇ. 9.30ರ ಬಡ್ಡಿ ನೀಡಲಾಗುವುದು. 5 ವರ್ಷಗಳ ನಂತರ ಆರ್‌ಬಿಐನ ಅನುಮತಿಯಿಂದ, ಬ್ಯಾಂಕ್ ಹಣವನ್ನು ಹಿಂತಿರುಗಿಸುವ ಹಕ್ಕನ್ನು ಪಡೆದಿದೆ. ಈ ಬಾಂಡ್‌ನಲ್ಲಿ ಅವಧಿಗೆ ಮುಂಚೆ ಹಣ ಪಡೆಯುವ ಅವಕಾಶವಿಲ್ಲ. ನಾಲ್ಕನೇ ಸರಣಿಯ ಬಾಂಡ್‌ಗಳು 15 ವರ್ಷದ ಅವಧಿಯದಾಗಿದ್ದು ರೀಟೆಲ್ ಹೂಡಿಕೆದಾರರಿಗೆ ಶೇ. 9.95 ಇತರರಿಗೆ ಶೇ. 9.45 ರಂತೆ ವಾರ್ಷಿಕ ಬಡ್ಡಿ ನೀಡಲಾಗುವುದು. ನಾಲ್ಕನೇ ಸರಣಿಯಲ್ಲಿಯೂ ಸಹ ಅವಧಿಗೆ ಮುಂಚೆ ಹಣ ಮರಳಿ ಪಡೆಯಲು ಅವಕಾಶವಿಲ್ಲ 10 ವರ್ಷದ ನಂತರ ಬ್ಯಾಂಕ್ ಇಚ್ಚಿಸಿದಲ್ಲಿ ಆರ್‌ಬಿಐನ ಅನುಮತಿಯಿಂದ, ಹಣ ಹಿಂತಿರುಗಿಸುವ ಹಕ್ಕು ಹೊಂದಿರುತ್ತದೆ.ಈ ಬಾಂಡ್‌ಗಳಲ್ಲಿ ಸಣ್ಣ ಹೂಡಿಕೆದಾರರಲ್ಲದೆ, ಕಂಪೆನಿಗಳು, ಸಾರ್ವಜನಿಕ ಸಂಸ್ಥೆಗಳು ಹೆಚ್.ಯು.ಎಫ್. ಗಳು ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ರೂ. 10,000 ದಿಂದ ರೂ 5 ಲಕ್ಷದವರೆಗೂ ರೀಟೇಲ್ ಹೂಡಿಕೆದಾರರು ತೊಡಗಿಸಬಹುದಾಗಿದ್ದು. ಸಾಹುಕಾರಿ ವ್ಯಕ್ತಿಗಳು ಕನಿಷ್ಠ ರೂ 5 ಲಕ್ಷ ಹತ್ತು ಸಾವಿರದಿಂದ ರೂ 250 ಕೋಟಿವರೆಗೂ ಹೂಡಿಕೆಗೆ ಅವಕಾಶವಿದೆ. ಅಲ್ಲಾಟ್‌ಮೆಂಟ್ ಪಡೆಯಲು ವಿಫಲರಾದವರಿಗೆ ರೀಫಂಡ್ ಜೊತೆಗೆ ಶೇ. 4 ಬಡ್ಡಿಯನ್ನು ಆ ಅವಧಿಯವರೆಗೂ, ಯಶಸ್ವಿಯಾದ ಅಲ್ಲಾಟೀಸ್‌ಗೆ ಶೇ. 7ರ ಬಡ್ಡಿ ನೀಡಲಾಗುವುದು. ಮುಖ್ಯವಾಗಿ ಲಾಕ್-ಇನ್ ಯೋಜನೆಯಾದರೂ ಈ ಬಾಂಡ್‌ಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟಿಗೆ ನೊಂದಾಯಿಸಲಾಗುವುದು ಈ ಕಾರಣ ಅತ್ಯವಶ್ಯಕವೆನಿಸಿದಲ್ಲಿ ಬಾಂಡ್ ಮಾರಾಟದ ಮೂಲಕ ಹಣ ಪಡೆಯುವ ವ್ಯವಸ್ಥೆ ಇದೆ. ಫಿಕ್ಸೆಡ್ ಆದಾಯದ ಯೋಜನೆ ಬಯಸುವವರಿಗೆ ವರದಾನ ಮೊದಲು ಬಂದವರಿಗೆ ಆದ್ಯತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry