ಸೋಮವಾರ, ನವೆಂಬರ್ 18, 2019
20 °C

ಮರಳಿ ಜೊತೆಯಾಗಿ...

Published:
Updated:
ಮರಳಿ ಜೊತೆಯಾಗಿ...

ಬಾಲಿವುಡ್ ಕನ್ನಡತಿ ನಟಿ ದೀಪಿಕಾ ಪಡುಕೋಣೆ ಮತ್ತು ರಣ್‌ಬೀರ್ ಕಪೂರ್ ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿಯೇನೂ ಉಳಿದಿರಲಿಲ್ಲ. 2008ರಲ್ಲಿ ತೆರೆಕಂಡಿದ್ದ `ಬಚ್ನಾ ಯೇ ಹಸಿನೋ' ಚಿತ್ರದಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಮುಂದೆ ಇವರಿಬ್ಬರೂ ಜೋಡಿಹಕ್ಕಿಗಳಂತೆ ಹೋಟೆಲ್, ಪಾರ್ಟಿ, ಪಬ್‌ಗಳಲ್ಲೆಲ್ಲಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಗೆ ಏನಾಯಿತೋ ಗೊತ್ತಿಲ್ಲ, ಒಂದು ದಿನ ಇಬ್ಬರೂ ಪರಸ್ಪರ ದೂರಾದರು.ಆನಂತರ ದೀಪಿಕಾ ಮತ್ತು ರಣ್‌ಬೀರ್ ಒಟ್ಟಾಗಿ ನಟಿಸಲಿಲ್ಲ. ಇವೆಲ್ಲಾ ಆಗಿ ಬರೋಬ್ಬರಿ ಐದು ವರ್ಷಗಳು ಕಳೆದಿವೆ. ಹೊಸ ಸುದ್ದಿ ಏನು ಅಂದರೆ ದೀಪಿಕಾ ಮತ್ತು ರಣ್‌ಬೀರ್ ಕಪೂರ್ ಈಗ ಮತ್ತೊಮ್ಮೆ ಒಂದಾಗಿದ್ದಾರೆ. ನಿಜ ಜೀವನದಲ್ಲಿ ಅಲ್ಲ, ರೀಲ್ ಲೈಫ್‌ನಲ್ಲಿ. ರಣ್‌ಬೀರ್ ಮತ್ತು ದೀಪಿಕಾ ಬಹಳ ವರ್ಷಗಳ ನಂತರ ಒಂದೇ ಚಿತ್ರಕ್ಕಾಗಿ ಬಣ್ಣಹಚ್ಚಿದ್ದಾರೆ. ಚಿತ್ರದ ಹೆಸರು `ಯೇ ಜವಾನಿ ಹೈ ದಿವಾನಿ'.

ಈ ಚಿತ್ರದಲ್ಲಿ ದೀಪಿಕಾ ತಮ್ಮ ಮಾಜಿ ಪ್ರಿಯಕರ ರಣಬೀರ್ ರಪೂರ್ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರು ತಮ್ಮ ನಡುವಿನ ಸಂಬಂಧದ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. “ರಣಬೀರ್ ಮತ್ತು ನನ್ನ ನಡುವೆ ಈ ಹಿಂದೆ ಒಂದು ಭಾವನಾತ್ಮಕ ಸಂಬಂಧವಿತ್ತು. ಆ ಸಂಬಂಧದಲ್ಲಿ ಪ್ರೀತಿ ಇತ್ತು. ನಂಬಿಕೆ ಇತ್ತು. ಆದರೆ, ಈಗ ನಾವಿಬ್ಬರೂ ಸ್ನೇಹಿತರು ಮಾತ್ರ. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದೇವೆ. ನಮ್ಮ ಈ ಸ್ನೇಹ ಕೊನೆ ಉಸಿರು ಇರುವವರೆಗೂ ಇರುತ್ತದೆ. `ಯೇ ಜವಾನಿ ಹೈ ದಿವಾನಿ' ಚಿತ್ರೀಕರಣದ ವೇಳೆ ನಾವಿಬ್ಬರೂ ನಮ್ಮ ವೈಯಕ್ತಿಕ ವಿಚಾರಗಳನ್ನು ಮರೆತು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಸೆಟ್‌ನಲ್ಲಿ ಖುಷಿಯಿಂದ ಇರುತ್ತಿದ್ದೆವು. ಹಾಗಾಗಿ ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ' ಎಂದಿದ್ದಾರೆ ದೀಪಿಕಾ.ಅಂದಹಾಗೆ, ದೀಪಿಕಾ ಅಭಿನಯದ ಮೂರು ಚಿತ್ರಗಳು ಈ ವರ್ಷ ತೆರೆಕಾಣಲಿವೆ. ಅವುಗಳಲ್ಲಿ `ಯೇ ಜವಾನಿ ಹೈ ದಿವಾನಿ' ಚಿತ್ರದ ಬಗ್ಗೆ ದೀಪಿಕಾ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಉಳಿದಂತೆ ಶಾರುಖ್ ಜತೆಗಿನ `ಚೆನ್ನೈ ಎಕ್ಸ್‌ಪ್ರೆಸ್' ಹಾಗೂ ರಣ್‌ವೀರ್ ಸಿಂಗ್ ಜತೆಗಿನ `ರಾಮ್ ಲೀಲಾ' ಸಿನಿಮಾಗಳು ದೀಪಿಕಾ ಕೈಯಲ್ಲಿವೆ. 

ಪ್ರತಿಕ್ರಿಯಿಸಿ (+)