ಮರಳು ಗಣೇಶ

7

ಮರಳು ಗಣೇಶ

Published:
Updated:
ಮರಳು ಗಣೇಶ

ಮರಳು ಶಿಲ್ಪದಲ್ಲಿ ಅಂತರ‌್ರಾಷ್ಟ್ರೀಯ ಪ್ರಸಿದ್ಧಿ ಪಡೆದ ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಕಲೆಯ ಝಲಕ್ ನೋಡುವ ಅವಕಾಶ ಕಲ್ಪಿಸಿದೆ `ಒರಿಸ್ಸಾ ಗಣೇಶ ಪೂಜಾ ಸಮಿತಿ~.ಹೊಸ ತಿಪ್ಪಸಂದ್ರ ಬಿಇಎಂಎಲ್ ಟೌನ್‌ಶಿಪ್ ಕಲ್ಯಾಣ ಮಂದಿರದ ಪಕ್ಕದ ಬಯಲಿನಲ್ಲಿ ಪಟ್ನಾಯಕ್ ಅವರು ಸುಮಾರು 17 ತಾಸು ಶ್ರಮಪಟ್ಟು ಮರಳಿನಲ್ಲಿ ಮುದ್ದಾದ ಗಣೇಶನನ್ನು ನಿರ್ಮಿಸಿದ್ದಾರೆ. ಸೊಂಡಿಲಿನ ತುದಿಯಲ್ಲಿ ಬಿಳಿ ಗಾಂಧಿ ಟೋಪಿ ಧರಿಸಿದ ಅಣ್ಣಾ ಹಜಾರೆಯನ್ನು ಚಿತ್ರಿಸಿದ್ದಾರೆ.ಶಿಲ್ಪ ರಚನೆಗೆ ಬೇಕಾದ ಮರಳಿಗಾಗಿಯೇ ಸಮಿತಿ ಒಂದೂ ಕಾಲು ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಈ ಅಪರೂಪದ ಕಲಾಕೃತಿ ಪ್ರದರ್ಶನ ಗುರುವಾರ ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry