ಗುರುವಾರ , ಜನವರಿ 23, 2020
28 °C

ಮರಳು ನೀತಿಗೆ 20 ರಿಂದ ಲಾರಿ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮರಳು ಸಾಗಣೆ ಕುರಿತು ನೂತನ ಮರಳು ನೀತಿ ಜಾರಿ­ಗೆ ಒತ್ತಾಯಿಸಿ ಡಿ. 20ರಿಂದ ರಾಜ್ಯ­ದಾದ್ಯಂತ ಅನಿರ್ದಿಷ್ಟ ಕಾಲ ಮರಳು ಲಾರಿಮುಷ್ಕರ ನಡೆಸ­ಲಾಗುವುದು’ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಹೇಳಿದರು.‘ಈ ಹಿಂದೆ ಮರಳು ನೀತಿ ಜಾರಿಗೆ ಒತ್ತಾಯಿಸಿ ಮುಷ್ಕರ ನಡೆಸಿದಾಗ ಶೀಘ್ರ ನೂತನ ಮರಳು ನೀತಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ,  ಇದುವರೆಗೂ ನೂತನ ಮರಳು ನೀತಿಯನ್ನು ಜಾರಿಗೊಳಿಸಿಲ್ಲ. ಆದ್ದರಿಂದ ರಾಜ್ಯದಲ್ಲಿರುವ 15 ಸಾವಿರಕ್ಕೂ ಹೆಚ್ಚು ಮರಳು ಲಾರಿಗಳನ್ನು ಸ್ಥಗಿತಗೊಳಿಸಿ   ಮುಷ್ಕರ ನಡೆಸುವುದು ಅನಿವಾರ್ಯ­ವಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಮರಳು ಲಾರಿಗಳಿಗೆ ರೂ 50 ಸಾವಿರ­ದಿಂದ 70 ಸಾವಿರದವರೆಗೆ ದಂಡ ಹಾಕಲಾಗುತ್ತದೆ. ಇದು­ವರೆ­ಗೂ 1,200 ಮಂದಿ ಲಾರಿ ಮಾಲೀಕರ ಮೇಲೆ ದೂರು

ದಾಖ­ಲಿಸುವ ಮೂಲಕ ದೌರ್ಜನ್ಯ ಎಸಗ­ಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)