ಮರಳು ನೀತಿ ಜಾರಿಗೆ ಒತ್ತಾಯ

7

ಮರಳು ನೀತಿ ಜಾರಿಗೆ ಒತ್ತಾಯ

Published:
Updated:

ಶಹಾಪುರ: ತಾಲ್ಲೂಕಿನಲ್ಲಿ ಮರಳು  ಮಾರಾಟದ ಜಾಲ ಅಧಿಕವಾಗಿದ್ದು ಜನಸಾಮಾನ್ಯರು ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರ ತನ್ನ ನೀತಿಯನ್ನು ಜಾರಿಗೆಗೊಳಿಸಿ ಕಡಿಮೆ ಬೆಲೆಗೆ ಮರಳು ದೊರೆಯುವಂತೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಮರಳು ಸಾಗಾಟದ ಅಕ್ರಮದಿಂದ ತಾಲ್ಲೂಕಿನಲ್ಲಿ ಮರಳು ಮಾರಾಟ ನಿಷೇಧಿಸಲಾಗಿದೆ. ಇದರಿಂದ ಬಡ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಟ್ರ್ಯಾಕ್ಟರ್ ಮಾಲಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕೆ.ಎಂ.ಪಾಶ ಆರೋಪಿಸಿದ್ದಾರೆ.ಯಾವುದೇ ನೀತಿ ನಿಯಮಗಳನ್ನು ಜನತೆಯ ಒಳತಿಗಾಗಿ ಇರಬೇಕು. ರಾಜಸ್ವ ಭರಿಸುವ ಬಗ್ಗೆ ಪಾರದರ್ಶಕ ನಿಯಮವನ್ನು ಅನುಸರಿಸಬೇಕು. ಸಾರ್ವಜನಿಕ ಕೆಲಸಕ್ಕಾಗಿ ಮರಳು ಸಾಗಾಟದ ನೆಪದಲ್ಲಿ ಕೆಲ ಮಧ್ಯವರ್ತಿಗಳು ಅಕ್ರಮವಾಗಿ ಮರಳು ಮಾರಾಟ ನಡೆಸಿದ್ದಾರೆ.ನ್ಯಾಯಬದ್ದವಾಗಿ ಮರಳು ಖರೀದಿಸಿದರೂ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಯವರು ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ತಾಲ್ಲೂಕು ಕಾರ್ಯದರ್ಶಿ ಸಯ್ಯದ ಇಸಾಕ್ ಹುಸೇನಿ ಆಗ್ರಹಿಸಿದ್ದಾರೆ.ಪ್ರತಿಭಟನೆಯಲ್ಲಿ ಮಹಿಬೂಬು ಗೋಗಿ, ಬಂದೇನವಾಜ್, ಮಹ್ಮದ ಯೂನೂಸ್, ಸಯ್ಯದ ಕಲಿಮುಲ್ಲಾ, ಮುನೀರ ಭಾಗವಾನ್ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry