ಮರಳು ಶುದ್ಧೀಕರಣ: ದಾಳಿ, ನಾಶ

7

ಮರಳು ಶುದ್ಧೀಕರಣ: ದಾಳಿ, ನಾಶ

Published:
Updated:

ಮುಳಬಾಗಲು: ಅಕ್ರಮ ಮರಳು ಶುದ್ಧೀಕರಣ ಕೇಂದ್ರಗಳ ಮೇಲೆ ಶನಿವಾರ ಅಧಿಕಾರಿಗಳ ತಂಡ ದಾಳಿ ನಡೆಸಿ ಕೇಂದ್ರಗಳನ್ನು ನಾಶಪಡಿಸಿತು.ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ದುಗ್ಗಸಂದ್ರ ಹೋಬಳಿಯಲ್ಲಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ಬೈರಕೂರು ಹೋಬಳಿ ಅಕ್ರಮ ಮರಳು ಶುದ್ಧೀಕರಣ ಕೇಂದ್ರಗಳ ಮೇಲೆ ದಾಳಿ ನಡೆಸಿತು.

 

ನೆಗವಾರ ಗ್ರಾಮದ ಬಳಿ ರಸ್ತೆಯನ್ನು ಸಹ ಆಕ್ರಮ ಮರಳು ಶುದ್ಧೀಕರಣಕ್ಕೆ ಬಳಸಲಾಗುತ್ತಿದ್ದು, ಜಮೀನಿನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.ಹೈಟ್‌ನ್‌ಷನ್ ವಿದ್ಯುತ್ ಲೈನಿನ ಮೂಲಕ ಆಕ್ರಮ ಮರಳು ಶುದ್ಧೀಕರಣ ಕೇಂದ್ರಕ್ಕೆ ವಿದ್ಯುತ್ ಉಪಯೋಗಿಸುತ್ತಿದ್ದ ಬಗ್ಗೆ ಬೆಸ್ಕಾಂಗೆ ದೂರು ಸಲ್ಲಿಸಲಾಯಿತು.ಭೂ ಮತ್ತು ಗಣಿ ಇಲಾಖೆ ಷಣ್ಮುಗಂ. ಹನುಮಂತಯ್ಯ, ಗಂಗಯ್ಯ, ಕೃಷ್ಣಪ್ಪ, ರಾಜಸ್ವ ನಿರೀಕ್ಷಕ ಹನುಮೇಶ್, ಕಂದಾಯ ಇಲಾಖೆಯಿಂದ ತಹಶೀಲ್ದಾರ್ ಪಿ.ಜಯಮಾಧವ, ರಾಜಸ್ವನಿರೀಕ್ಷಕ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry