ಮರಳು ಸಾಗಾಟ-ನಿರ್ಲಕ್ಷ್ಯ ಆರೋಪ

7
24ರಂದು ರಸ್ತೆ ತಡೆ ಚಳವಳಿ

ಮರಳು ಸಾಗಾಟ-ನಿರ್ಲಕ್ಷ್ಯ ಆರೋಪ

Published:
Updated:

ಚಿತ್ತಾಪುರ: ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಮರಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.  ಮುಳ್ಳಿನ ಗಿಡಗಂಟಿ, ಜೇಕು ಬೆಳೆದು ಇಡೀ ನದಿಯ ಒಡಲು ಬರಡಾಗಿ ಕಳೆಯಿಂದ ತುಂಬಿದೆ ಎಂದು ಭಾಗೋಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವಿಂದ್ರ ಎಂ ಅರಣಕಲ್ ಆರೋಪಿಸಿದ್ದಾರೆ.ಕಾಗಿಣಾ ನದಿಯಲ್ಲಿ ತಲೆ ಎತ್ತಿರುವ ಮರಳು ಮಾಫಿಯಾಕ್ಕೆ ರಾಜಕೀಯ ಪ್ರಭಾವ ಮತ್ತು ಆಡಳಿತ ಅಧಿಕಾರಿಗಳ ಶಾಮೀಲಿನಿಂದ ಕಾಗಿಣಾ ನದಿಯ ಮರಳು ಸಂಪತ್ತು ಅಕ್ರಮ ದಂಧೆಕೋರರ ಪಾಲಾಗುತ್ತಿದೆ. ದಿನಾಲೂ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾಗಿಣಾ ನದಿಯತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ನದಿಯ ಮರಳು ಕಾಪಾಡಬೇಕಾದ ಚಿತ್ತಾಪುರ ಮತ್ತು ಕಾಳಗಿ ಲೋಕೋಪಯೋಗಿ ಇಲಾಖೆ ಎಂಜಿನೀಯರರು ಮರಳು ಸಾಗಾಟ ತಡೆಯಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅರಣಕಲ್ ದೂರಿದ್ದಾರೆ.ಕಾಗಿಣಾ ನದಿಯ ಮರಳು ಅಕ್ರಮ ಸಾಗಾಟ ನಡೆಯುತ್ತಿದ್ದರೂ ಕಂದಾಯ ಇಲಾಖೆಯಂತೂ ನೋಡಿಯೂ ನೋಡದಂತೆ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ. ಚಿತ್ತಾಪುರ ತಹಶೀಲ್ದಾರ್ ಸೇಡಂ ಸಹಾಯಕ ಆಯುಕ್ತರು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಿರ್ಲಕ್ಷಿಸುತ್ತಿದ್ದಾರೆ. ಕಾಗಿಣಾ ನದಿಯಲ್ಲಿನ ಅತ್ಯಮೂಲ್ಯ ರಾಷ್ಟ್ರೀಯ ಸಂಪತ್ತು ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ರಕ್ಷಣೆ ಮಾಡಿ ತಡೆಯುವವರು ಯಾರೂ ಇಲ್ಲವಾಗಿದೆ ಎಂದು ಅರಣಕಲ್ ಆರೋಪಿಸಿದ್ದಾರೆ.ರಾಜಕೀಯ ಕೃಪಾಕಟಾಕ್ಷದಿಂದ ಕಾಗಿಣಾ ನದಿಯಲ್ಲಿ ನಿರ್ಭಯವಾಗಿ ಭಾಗೋಡಿ ಹತ್ತಿರ ತಲೆ ಎತ್ತಿರುವ ಮರಳು ಮಾಫಿಯಾ ದಂಧೆ ತಡೆಯಲು ಜಲ್ಲಾಡಳಿತ ಗಮನವೇ ಹರಿಸುತ್ತಿಲ್ಲ. ನದಿಯಲ್ಲಿನ ಮರಳು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮರಳು ಮಾಫಿಯಾ ದಂಧೆಕೋರರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ನಡುವೆ ಅಪವಿತ್ರ ಮೈತ್ರಿ ಹಾಲು ನೀರಿನ ಮಿಶ್ರಣದಂತ್ತಾಗಿದೆ ಎಂದು ನೇರವಾಗಿ ಆರೋಪಿಸಿರುವ ಅರಣಕಲ್ ಯಾದಗಿರಿ ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮದಂತೆ ಇಲ್ಲಿಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಮರಳು ತುಂಬಿಕೊಂಡು ರಸ್ತೆಯಲ್ಲಿ ಸಾಗುವ ಲಾರಿ, ಟ್ರ್ಯಾಕ್ಟರ್‌ಗಳಿಗೆ ತಡೆದು ಕೇಳುವವರು, ವಿಚಾರಣೆ ಮಾಡುವವರು ಇಲ್ಲವಾಗಿದೆ. ಅಧಿಕೃತವಾಗಿ ಪರವಾನಿಗೆ ಪಡೆದಿದ್ದಾರೆ ಇಲ್ಲವೋ? ಎಂದು ಸಂಬಂಧಿತ ಅಧಿಕಾರಿಗಳಿಂದ ವಿಚಾರಣೆಯೂ ನಡೆಯುತ್ತಿಲ್ಲ. ಅಕ್ರಮ ಮರಳು ಸಾಗಾಟ ಮಾಡುವವರು ಮತ್ತು ಅಧಿಕಾರಿಗಳ ಶಾಮೀಲಿನಿಂದ ಕಾಗಿಣಾ ನದಿಯ ಒಡಲು ಮರಳು ಇಲ್ಲದೆ ಇಂದು ಬರಡಾಗಿದೆ. ಮರಳು ಇರಬೇಕಾದ ಸ್ಥಳದಲ್ಲಿ ಹೊಂಡಗಳು, ಮುಳ್ಳಿನ ಗಿಡಗಂಡಿ, ನದಿಯ ತುಂಬಾ ಜೇಕು ಬೆಳೆದು ವಿಷಕಾರಿ ಜೀವ ಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ನದಿಯ ನೀರು ಕಲುಷಿತವಾಗಿದೆ. ಹೊಂಡಗಳಿಂದ ಮತ್ತು ಕಲುಷಿತ ನೀರಿನಿಂದ ಜನ ಜಾನುವಾರುಗಳಿಗೆ ಅಪಾಯ ಎದುರಾಗಿದೆ. ನದಿ ದಂಡೆಯ ಮೇಲಿರುವ ಭಾಗೋಡಿ ಗ್ರಾಮಕ್ಕೆ ಮಳೆಗಾಲದಲ್ಲಿ ಬರುವ ಪ್ರವಾಹದಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಅನಾಹುತ ಸಂಭವಿಸಬಹುದು ಎಂದು ಗ್ರಾಮಸ್ಥರು ಆತಂಕ ಪಡುವಂತ್ತಾಗಿದೆ ಎಂದು ದೇವಿಂದ್ರ ಕಳವಳ ವ್ಯಕ್ತ ಮಾಡಿದ್ದಾರೆ.ಡಿ.24 ರಂದು ರಸ್ತೆ ತಡೆ:

ಭಾಗೋಡಿ ಗ್ರಾಮದ ಹತ್ತಿರ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ತಡೆಯುವಂತೆ ತಹಶೀಲ್ದಾರ್ ಹಾಗೂ ಸೇಡಂ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರೂ ಅವರು ಇತ್ತ ಗಮನ ಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಹಾಗೂ ಮರಳು ಸಾಗಾಟ ಸಂಪೂರ್ಣ ನಿಷಧಿಸಿ ಅಕ್ರಮ ಮರಳು ಸಾಗಾಟ ಮಾಡುವವರ ಮತ್ತು ಜೆಸಿಬಿ, ಹಿಟಾಚಿ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಡಿ.24 ರಂದು ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಹತ್ತಿರ ಗುಲ್ಬರ್ಗ-ಸೇಡಂ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭಾಗೋಡಿ ಗ್ರಾಮ ಘಟಕದ ಸಂಚಾಲಕ ಭೀಮರಾಯ ಹೆಡಗಿ, ತಾಲ್ಲೂಕು ಸಂಘನಾ ಸಂಚಾಲಕ ಮಲ್ಲಿಕಾರ್ಜುನ ಏರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry