ಸೋಮವಾರ, ಮೇ 23, 2022
28 °C

ಮರವಂತೆ: ಮಳೆಗೆ ಶಾಲೆಯ ಮಾಡು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರವಂತೆ (ಬೈಂದೂರು): ಶಿಥಿಲವಾಗಿದ್ದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಭಾಗದ ಒಂದು ಕೋಣೆಯ ಮಾಡು ಸೋಮವಾರ ಭಾಗಶಃ ಕುಸಿದಿದೆ.ಮಾಡಿನ ಪಕ್ಕಾಸಿ ಮತ್ತು ರೀಪು ಹಳೆಯದಾಗಿದ್ದರಿಂದ, ಮಳೆಯಿಂದ ಒದ್ದೆಯಾದ ಹಂಚಿನ ಭಾರ ತಡೆಯಲಾಗದೆ ಈ ಕುಸಿತ ಸಂಭವಿಸಿದೆ. ಕಟ್ಟಡ ಅಸುರಕ್ಷಿತ ಎಂಬ ಕಾರಣದಿಂದ ಇಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ.ಶಾಲೆಯ ನಾಲ್ಕು ಕೊಠಡಿಗಳು ದುಸ್ಥಿತಿಯಲ್ಲಿದ್ದು, ಅವುಗಳಿಗೆ ಬದಲಿ ಕಟ್ಟಡ ನಿರ್ಮಿಸುವಂತೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಲೆಯ ಮುಖ್ಯೊಪಾಧ್ಯಾಯ ಮೊಹನದಾಸ್ ತಿಳಿಸಿದ್ದಾರೆ.ಆದರೆ ಅದು ಮಂಜೂರಾಗುವ ಮೊದಲೇ ಆದ ಈ ಕುಸಿತ ನೂತನ ಕಟ್ಟಡ ನಿರ್ಮಾಣದ ಅಗತ್ಯವನ್ನು ಬಿಂಬಿಸಿದೆ. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೋಮಯ್ಯ ಬಿಲ್ಲವ ಅವರ ನೇತೃತ್ವದಲ್ಲಿ ಮಂಗಳವಾರ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.