ಮರಾಠಾ ಭವನಕ್ಕೆ 25ಲಕ್ಷ ರೂಪಾಯಿ ಅನುದಾನ

ಬುಧವಾರ, ಜೂಲೈ 17, 2019
28 °C

ಮರಾಠಾ ಭವನಕ್ಕೆ 25ಲಕ್ಷ ರೂಪಾಯಿ ಅನುದಾನ

Published:
Updated:

ಭಾಲ್ಕಿ: ಬೀದರ್ ಜಿಲ್ಲಾ ಕೇಂದ್ರದಲ್ಲಿ ಕ್ಷೇತ್ರೀಯ ಮರಾಠಾ ಪರಿಷತ್‌ನಿಂದ ನಿರ್ಮಿಸುತ್ತಿರುವ ಭವನಕ್ಕೆ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡುವದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ದಿಗಂಬರರಾವ ಮಾನಕರಿ ಮಾಹಿತಿ ನೀಡಿದ್ದಾರೆ.ಮಾಜಿ ಶಾಸಕ ಪ್ರಕಾಶ ಖಂಡ್ರೆಯವರ ನೇತೃತ್ವದಲ್ಲಿ ಮರಾಠಾ ಪರಿಷತ್ ಮುಖಂಡರು ಈಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭೇಟಿ ಮಾಡಲಾಗಿದೆ. ಗಡಿ ಭಾಗದ ಮರಾಠಿ ಭಾಷಿಕರ ಸ್ಥಿತಿಗತಿಯ ಬಗ್ಗೆಯೂ ಚರ್ಚಿಸಲಾಯಿತು ಎಂದು ತಿಳಿಸಿದರು. ಜಿಲ್ಲಾ ಕೇಂದ್ರದಲ್ಲಿ ಮರಾಠಾ ಭವನ ನಿರ್ಮಾಣಕ್ಕಾಗಿ ಮನವಿ ಪತ್ರ ಸಲ್ಲಿಸಲಾಗಿದೆ.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿ.ಎಸ್. ಯಡಿಯೂರಪ್ಪ ಆರಂಭಿಕ ಹಂತವಾಗಿ ತಕ್ಷಣವೇ 25ಲಕ್ಷ ರೂ ಅನುದಾನ ಬಿಡುಗಡೆ ಮಾಡುವದಾಗಿ ತಿಳಿಸಿದ್ದಾರೆಂದು ಮಾನಕರಿ ಹೇಳಿದರು.ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಗ್ರಂಥಾಲಯ, ಮಂಗಲ ಕಾರ್ಯಾಲಯ, ಸಭಾ ಭವನ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ವಿವಿಧ ಮೂಲಗಳಿಂದ ಆರ್ಥಿಕ ಶಕ್ತಿಯನ್ನು ಕ್ರೋಡೀಕರಿಸಿ ಬೃಹತ್ ಭವನವನ್ನು ನಿರ್ಮಿಸುತ್ತವೆ ಎಂದರು.ಭಾತಂಬ್ರಾ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ ಕಾರಬಾರಿ, ಸ್ವಾತಂತ್ರ್ಯ ಹೋರಾಟಗಾರ ಯಶವಂತರಾವ ಸಾಯಗಾಂವಕರ, ರಘೂನಾಥರಾವ ಜಾಧವ, ರಾವಸಾಹೇಬ ಬಿರಾದಾರ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry