ಮಂಗಳವಾರ, ಜನವರಿ 28, 2020
17 °C

ಮರಾಠಿ ಭಾಷೆಯಲ್ಲಿ ದಾಖಲೆ ಪತ್ರ ಶಾಸಕ ಸಂಭಾಜಿ ಪಾಟೀಲ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಪದೇ ಪದೇ ಕೆದಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಗಡಿ ಭಾಗದಲ್ಲಿ ಮರಾಠಿಯಲ್ಲಿ ಸರ್ಕಾರದ ದಾಖಲೆ ಒದಗಿಸಬೇಕೆಂದು ಆಗ್ರಹಿಸಿದೆ.ಮಹಾರಾಷ್ಟ್ರ ಏಕೀಕರಣ ಸಮಿತಿ ಶಾಸಕ ಸಂಭಾಜಿ ಪಾಟೀಲ ಬುಧವಾರ ಸಂಸತ್‌ ಭವನದಲ್ಲಿ ಗಡಿ ಭಾಗದ ಜನರಿಗೆ ಮರಾಠಿಯಲ್ಲಿ ದಾಖಲೆ ಒದಗಿಸಲು ಕರ್ನಾಟಕ ಸರ್ಕಾರಕ್ಕೆ ಸೂಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಮಹಾರಾಷ್ಟ್ರ ಸಂಸದ­ರಿಗೆ ಮನವಿ ಮಾಡಿದರು.ಮಹಾರಾಷ್ಟ್ರ ಸಂಸದರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ ಸಂಭಾಜಿ ಪಾಟೀಲ್‌, ಗಡಿ ಭಾಗದ ಜನರಿಗೆ ಮರಾಠಿಯಲ್ಲಿ ದಾಖಲೆ ಒದಗಿಸಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಶೇ. 15ಕ್ಕಿಂತ ಹೆಚ್ಚು ಜನ ಕನ್ನಡೇತರರಾಗಿದ್ದರೆ ಅವರದೇ ಭಾಷೆಯಲ್ಲಿ ದಾಖಲೆ ಒದಗಿಸಬೇಕು ಎಂದು ಸಂಭಾಜಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)