ಮಂಗಳವಾರ, ಏಪ್ರಿಲ್ 20, 2021
24 °C

ಮರೀಚಿಕೆಯಾದ ಸ್ವಾತಂತ್ರ್ಯದ ಭಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಎ್ಲ್ಲಲ ಕ್ಷೇತ್ರಗಳಲ್ಲಿ ಅಜರಾಕತೆ ಹೆಚ್ಚಳವಾಗುವ ಮೂಲಕ ಸ್ವಾಂತಂತ್ರ್ಯ ಭಾವನೆ ಮರೀಚಿಕೆಯಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ವಿಷಾದಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ 66 ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಎಂ.ಪಿ. ಮಾರುತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾಮೂರ್ತಿ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ, ಜಿಲ್ಲಾಪಂಚಾಯ್ತಿ ಸದಸ್ಯರಾದ ಎಚ್.ಟಿ. ನಾಗರೆಡ್ಡಿ, ಮಾರಕ್ಕ ಓಬಯ್ಯ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬಲ್ಕಿಸ್‌ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಮಾರನಾಯಕ, ಗಡಿ ಪ್ರಾಧಿಕಾರದ ಕೆ.ಜಿ. ಪಾರ್ಥಸಾರಥಿ, ಇಒ ಅಂಜನ್‌ಕುಮಾರ್, ಸಿಪಿಐ ಎಸ್. ನಾಗರಾಜ್, ಪಟ್ಟಣ ಪಂಚಾಯ್ತಿ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಇಒ ಉಮಾದೇವಿ ಸ್ವಾಗತಿದರು, ಕೆ. ಶಾಂತವೀರಣ್ಣ, ಮರಿಕುಂಟೆ ತಿಪ್ಪೇಸ್ವಾಮಿ ನಿರೂಪಿಸಿದರು.

ದಾರಿದ್ರ್ಯ ತೊಲಗಿಸಿ

ಧರ್ಮಪುರ:  ದೇಶದಲ್ಲಿ ತಾಂಡ ಆಡುತ್ತಿರುವ ಭಯೋತ್ಪಾದನೆ, ದಾರಿದ್ರ್ಯ ಹಾಗೂ ಅನಕ್ಷರತೆ ಹೋಗಲಾಡಿಸಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ವೈ.ಆರ್.ಚೌಧರಿ ತಿಳಿಸಿದರು.

ಸಮೀಪದ ದೇವರಕೊಟ್ಟ ಗ್ರಾಮದ ಹಿಂದುಳಿದ, ಅಲ್ಪಸಂಖ್ಯಾತ, ಎಸ್‌ಸಿ ಹಾಗೂ ಎಸ್‌ಟಿ ಮೊರಾಜಿ ವಸತಿ ಸಮುಚ್ಚಯ ಶಾಲೆಯಲ್ಲಿ  ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಷ್ಣಮೂರ್ತಿ, ಮೂರ್ಕಣಪ್ಪ, ರಮೇಶ್, ರವೀಂದ್ರ ಉಪಸ್ಥಿರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.