ಮರುಕಳಿಸಲಿದೆ ದೆಹಲಿ...

7

ಮರುಕಳಿಸಲಿದೆ ದೆಹಲಿ...

Published:
Updated:
ಮರುಕಳಿಸಲಿದೆ ದೆಹಲಿ...

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ ಹಾಗೂ ಅಲ್ಕಾಝಿ ಫೌಂಡೇಶನ್ ಫಾರ್ ದಿ ಆರ್ಟ್ಸ್ ವತಿಯಿಂದ ಶನಿವಾರ ವಿನೂತನ ರೀತಿಯ ಕಲಾಪ್ರದರ್ಶನವನ್ನು ಏರ್ಪಡಿಸಲಾಗಿದೆ (ಪ್ರದರ್ಶನ ಮಾರ್ಚ್ 16ರವರೆಗೆ ನಡೆಯಲಿದೆ). `ಡಾನ್ ಅಪಾನ್ ಡೆಲ್ಲಿ: ರೈಸ್ ಆಫ್ ಎ ಕ್ಯಾಪಿಟಲ್' ಎಂಬ ಈ ಪ್ರದರ್ಶನದಲ್ಲಿ ನಮ್ಮ ದೇಶದ ರಾಜಧಾನಿ ರೂಪುಗೊಂಡ ಬಗೆ, ಬದಲಾದ ರೂಪುರೇಷೆ ಹಾಗೂ ಅದಕ್ಕೆ ಸಂಬಂಧಿಸಿದ ಇತಿಹಾಸ ತಿಳಿಸುವ ಪ್ರದರ್ಶನ ಇದಾಗಿದೆ. ಹಲವು ಕಲಾವಿದರು ರಚಿಸಿದ ಚಿತ್ರಕಲೆ, ಸೆರೆಹಿಡಿದ ಛಾಯಾಚಿತ್ರಗಳು ಹಾಗೂ ನಕಾಶೆಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು.19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಮಧ್ಯಭಾಗದಲ್ಲಿ ದೆಹಲಿ ಹೇಗಿತ್ತು ಮತ್ತು ರಾಜಕೀಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಈ ತಾಣ ತನ್ನ ಇರುವಿಕೆಯನ್ನು ಬದಲಾಯಿಸಿಕೊಂಡ ಪರಿಯ ಬಗ್ಗೆ ಇಲ್ಲಿ ಹಲವಾರು ಸಾಕ್ಷ್ಯ ಚಿತ್ರಣಗಳಿವೆ.ವಿವಿಧ ಸಂಗ್ರಹಾಲಯಗಳಿಂದ ಆಯ್ದ ಚಿತ್ರಗಳ ಪ್ರದರ್ಶನ ಇದಾಗಿದ್ದು, ವಿಶಿಷ್ಟತೆಯಿಂದ ಕಣ್ಸೆಳೆಯುತ್ತವೆ. ಹಿಂದಿದ್ದ ಅಡ್ಡಾದಿಡ್ಡಿ ರಸ್ತೆಗಳು, ದೆಹಲಿಯ ಪಟ್ಟಾಭಿಷೇಕ ದರ್ಬಾರು, ಅದಕ್ಕೆ ಸಾಕ್ಷಿಯಾದ ಸಾವಿರಾರು ಜನರ ಚಿತ್ರಗಳು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿವೆ.`ದೇಶದ ರಾಜಧಾನಿ ಹಲವಾರು ವರ್ಷಗಳ ಹಿಂದೆ ಹೇಗಿತ್ತು, ಬ್ರಿಟಿಷರ ಕಾಲ ಮತ್ತು ಆ ಆನಂತರದ ದಿನಗಳಲ್ಲಿ ಯಾವ ರೀತಿ ಬದಲಾವಣೆ ಕಂಡಿತು, ಅಭಿವೃದ್ಧಿಯ ಹಾದಿ ಹೇಗೆ ಸಾಗಿತು ಎಂಬ ಬಗ್ಗೆ ಅಧ್ಯಯನ ನಡೆಸಲು ಈ ಪ್ರದರ್ಶನ ಸಹಕಾರಿಯಾಗಲಿದೆ. ಪರಂಪರೆ ಹಾಗೂ ಸಾಂಸ್ಕೃತಿಕ ತಾಣವಾಗಿದ್ದ ದೆಹಲಿಯ ಪೂರ್ಣ ವಿವರಗಳನ್ನು ತಿಳಿಯುವ ಕುತೂಹಲ ಇದ್ದವರಿಗೆ ಈ ಪ್ರದರ್ಶನ ಖುಷಿ ನೀಡುತ್ತದೆ' ಎಂದು ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ ಕಾರ್ಯಕ್ರಮ ಹಾಗೂ ಪ್ರದರ್ಶನ ಅಧಿಕಾರಿ ಶಿವಾನಂದ್ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry