ಮರುಪರಿಶೀಲನಾ ಅರ್ಜಿ: ಕಂಪೆನಿ ಇಂಗಿತ

7

ಮರುಪರಿಶೀಲನಾ ಅರ್ಜಿ: ಕಂಪೆನಿ ಇಂಗಿತ

Published:
Updated:

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಪರವಾನಗಿ ರದ್ದುಗೊಳಿಸಿದ ತೀರ್ಪಿನಿಂದ ಆಘಾತಗೊಂಡಿರುವ ದೂರಸಂಪರ್ಕ ಕಂಪೆನಿಗಳು, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿವೆ.`ಪರವಾನಗಿ ಪಡೆಯಲು ಸರ್ಕಾರ ನಿಗದಿಗೊಳಿಸಿದ್ದ ನಿಯಮವನ್ನು ನಾವು ಪಾಲಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲದಿದ್ದರೂ ನಮಗೆ ಅನ್ಯಾಯವಾಗಿದೆ~ ಎಂದು ಕಂಪೆನಿಗಳು ಅಸಮಾಧಾನ ವ್ಯಕ್ತಪಡಿಸಿವೆ.ತಮ್ಮ ಕಂಪೆನಿ ಕಾನೂನಿಗೆ ಬದ್ಧವಾಗಿರುವ ಸಂಸ್ಥೆಯಾಗಿದೆ. ಕಂಪೆನಿಯ ಹಿತಾಸಕ್ತಿ ರಕ್ಷಿಸಲು ಕಾನೂನಿನಲ್ಲಿ ಎಲ್ಲ ಅವಕಾಶಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಸ್ಟೆಮಾ- ಶ್ಯಾಮ್‌ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.`ಸರ್ಕಾರದ ಪ್ರಕ್ರಿಯೆಯಲ್ಲಿ ಇದ್ದ ಲೋಪಗಳಿಗಾಗಿ ನಮಗೆ ದಂಡ ವಿಧಿಸಲಾಗಿದೆ~ ಎಂದು ಯೂನಿನಾರ್ ಅಸಮಾಧಾನ ವ್ಯಕ್ತಪಡಿಸಿದೆ.ಸಿಸ್ಟೆಮಾ- ಶ್ಯಾಮ್ ಕಂಪೆನಿ ಎಂಟಿಎಸ್ ಬ್ರ್ಯಾಂಡ್ ಹೆಸರಿನಲ್ಲಿ ಮೊಬೈಲ್ ಸೇವೆ ಒದಗಿಸುತ್ತಿದ್ದರೆ, ಯೂನಿಟೆಕ್- ಟೆಲಿನಾರ್ ಜಂಟಿ ಸಹಭಾಗಿತ್ವವು ಯೂನಿನಾರ್ ಹೆಸರಿನಲ್ಲಿ ಸೇವೆ ಒದಗಿಸುತ್ತಿದೆ. ಈ ಕಂಪೆನಿಗಳು ದೂರಸಂಪರ್ಕ ವಹಿವಾಟಿಗಗಿ ಭಾರಿ ಬಂಡವಾಳ ಹೂಡಿರುವ ಕಂಪೆನಿಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry