ಮರುಭೂಮಿಯಿಂದ ಉಡಾವಣಾ ನೆಲೆಗೆ ಫೆಲಿಕ್ಸ್ ಬಲೂನ್, ಕೋಶ

7

ಮರುಭೂಮಿಯಿಂದ ಉಡಾವಣಾ ನೆಲೆಗೆ ಫೆಲಿಕ್ಸ್ ಬಲೂನ್, ಕೋಶ

Published:
Updated:

ಲಂಡನ್ (ಪಿಟಿಐ): ಶಬ್ದದ ವೇಗವನ್ನು ಮೀರಿಸಿ ಆಗಸದಿಂದ 39 ಕಿ.ಮೀ. ಕೆಳಗೆ ಧುಮುಕಿ ವಿಶ್ವ ದಾಖಲೆ ಸ್ಥಾಪಿಸಿರುವ ಆಸ್ಟ್ರಿಯಾದ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಹಾರಲು ಬಳಸಿದ್ದ ಬಿಸಿಗಾಳಿ ಬಲೂನ್ ಮತ್ತು ಕೋಶವನ್ನು ನ್ಯೂ ಮೆಕ್ಸಿಕೊ ಮರುಭೂಮಿಯಿಂದ ಉಡಾವಣಾ ನೆಲೆಗೆ ತರಲಾಗಿದೆ.



ನ್ಯೂ ಮೆಕ್ಸಿಕೊ ಮರುಭೂಮಿಯಲ್ಲಿ ಇಳಿದಿದ್ದ ಬಲೂನ್ ಮತ್ತು 1,682 ಕೆ.ಜಿ. ಭಾರದ ಕೋಶವನ್ನು ಪ್ರಾಯೋಜಕ ಸಂಸ್ಥೆಯಾದ ರೆಡ್ ಬುಲ್‌ನ ಸಿಬ್ಬಂದಿ ಒಟ್ಟಿಗೆ ಕಟ್ಟಿ ಹೊತ್ತು ತಂದಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಮೈನವಿರೇಳಿಸುವಂತೆ ಆಗಸದಿಂದ ಭೂಮಿಗೆ ಧುಮುಕಿದ ನಂತರ ಅಕ್ಟೋಬರ್ 14ರಂದು ಈ ಬಲೂನ್ ಮತ್ತು ಕೋಶ ಮರುಭೂಮಿಯಲ್ಲಿ ಇಳಿದಿತ್ತು.



ಫೆಲಿಕ್ಸ್ ಇಳಿದ ತಕ್ಷಣ ದೂರಸಂವೇದಿ ನಿಯಂತ್ರಕ ಸಾಧನದಿಂದ ಬಲೂನ್ ಮತ್ತು ಕೋಶವನ್ನು ಬೇರ್ಪಡಿಸಲಾಗಿತ್ತು. ಏಳು ಸುತ್ತಿನ ಬಲಾಢ್ಯ ರಕ್ಷಾ ಕವಚದಿಂದಾಗಿ ಬಲೂನ್ ಮತ್ತು ಕೋಶ ಎರಡೂ ಸುಸ್ಥಿತಿಯಲ್ಲಿದ್ದು, ಅದನ್ನು ಲಾರಿಯಲ್ಲಿ ಹೇರಿಕೊಂಡ ಸಿಬ್ಬಂದಿ, ಉಡಾವಣಾ ನೆಲೆಗೆ ತೆರಳಿದರು ಎಂದು ರೆಡ್ ಬುಲ್ ವೆಬ್‌ಸೈಟ್ ತಿಳಿಸಿದೆ.  



 ಕೋಶ ಮತ್ತು ಬಲೂನ್‌ಗೆ ಅಳಡಿಸಲಾಗಿದ್ದ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿರುವ ಸಿಬ್ಬಂದಿ, ಕ್ಯಾಲಿಫೋರ್ನಿಯಾದ ವೈಮಾನಿಕ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry