ಮರುಳಸಿದ್ದಪ್ಪ ಅವರಿಗೆ ಬೆಂಬಲ: ಸಾಹಿತಿ, ಚಿಂತಕರ ಮನವಿ

7

ಮರುಳಸಿದ್ದಪ್ಪ ಅವರಿಗೆ ಬೆಂಬಲ: ಸಾಹಿತಿ, ಚಿಂತಕರ ಮನವಿ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅವರನ್ನೇ ಬೆಂಬಲಿಸಬೇಕೆಂದು ನಾಡಿನ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರು ಶಾಸಕರಲ್ಲಿ ಮನವಿ ಮಾಡಿದ್ದಾರೆ.ನಾಡಿನ ಸಾಹಿತಿ ಮತ್ತು ಚಿಂತಕರಾದ ಜಿ.ಕೆ.ಗೋವಿಂದರಾವ್, ಕೋ.ಚನ್ನಬ ಶೂದ್ರ ಶ್ರೀನಿವಾಸ್, ಎಸ್.ಜಿ.ಸಿದ್ದರಾಮಯ್ಯ, ಎನ್.ಕೆ.ಮೋಹನ್‌ರಾಂ, ಲಕ್ಷ್ಮೀನಾರಾಯಣ ನಾಗವಾರ, ಶಿವರಾಮಯ್ಯ ಸೇರಿದಂತೆ ಇತರರು ಸಹಿ ಮಾಡಿರುವ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.‘ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವವರು ನಮ್ಮ ನಾಡಿನ ಹಿರಿಮೆಯನ್ನು ಎತ್ತಿಹಿಡಿಯುವ ವ್ಯಕ್ತಿತ್ವ ಉಳ್ಳವರಾಗಿರಬೇಕು. ಮರುಳಸಿದ್ದಪ್ಪ ಅವರು ಜನಪರ ಕಾಳಜಿಯುಳ್ಳ, ಚಿಂತನಶೀಲ ವ್ಯಕ್ತಿತ್ವವುಳ್ಳ ವಿದ್ವಾಸರು. ಇಂತಹವರು ಸ್ಪರ್ಧೆಯಲ್ಲಿದ್ದಾಗ ಗೆಲ್ಲಿಸುವುದು ಪ್ರಜ್ಞಾವಂತರಾದ ಜನಪ್ರತಿನಿಧಿಗಳ ಕರ್ತವ್ಯ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry