ಮರು ಚುನಾವಣೆ ನಡೆಸಲು ಎಎಫ್‌ಐಗೆ ಸೂಚನೆ

7

ಮರು ಚುನಾವಣೆ ನಡೆಸಲು ಎಎಫ್‌ಐಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ಮುಂದಿನ 60 ದಿನಗಳ ಒಳಗಾಗಿ ಕೆಲವೊಂದು ಸ್ಥಾನಗಳಿಗೆ ಮರುಚುನಾವಣೆ ನಡೆಸುವಂತೆ ಭಾರತ ಅಥ್ಲೆಟಿಕ್ ಫೆಡರೇಷನ್‌ಗೆ (ಎಎಫ್‌ಐ) ಕೇಂದ್ರ ಕ್ರೀಡಾ ಸಚಿವಾಲಯ ಸೂಚಿಸಿದೆ. ಇಲ್ಲದಿದ್ದಲ್ಲಿ, ಫೆಡರೇಷನ್‌ನ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದೆ.ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಸಚಿವಾಲಯ ತಿಳಿಸಿದೆ. ಅದೇ ರೀತಿ ತನ್ನ ಸಂವಿಧಾನದಲ್ಲೂ ಕೆಲವು ತಿದ್ದುಪಡಿ ತರುವಂತೆ ಹೇಳಿದೆ.`ಮುಂದಿನ 60 ದಿನಗಳ ಒಳಗೆ ಅಥವಾ 2013ರ ಫೆಬ್ರುವರಿ 28ರ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಯಾವುದೆ ಸೂಚನೆ ನೀಡದೆಯೇ ಫೆಡರೇಷನ್‌ನ ಮಾನ್ಯತೆ ರದ್ದುಪಡಿಸಲಾಗುವುದೆಂದು ಎಚ್ಚರಿಸಲಾಗಿದೆ' ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.ಸಚಿವಾಲಯ ಇತ್ತೀಚಿಗೆ ಭಾರತ ಆರ್ಚರಿ ಸಂಸ್ಥೆ ಮತ್ತು ಬಾಕ್ಸಿಂಗ್ ಫೆಡರೇಷನ್‌ನ ಮಾನ್ಯತೆ ರದ್ಧುಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry