ಮರು ಮೌಲ್ಯಮಾಪನ, ಸಂದರ್ಶನ

7
ಕೆಪಿಎಸ್‌ಸಿ 2011ರ ಪರೀಕ್ಷೆ ಹಗರಣ: ಸಿಐಡಿ ವರದಿಗೆ ಸಂಪುಟ ಒಪ್ಪಿಗೆ

ಮರು ಮೌಲ್ಯಮಾಪನ, ಸಂದರ್ಶನ

Published:
Updated:

ಬೆಂಗಳೂರು: 2011 ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿರುವ ಕಾರಣ, ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟದ ಸಭೆ ಈ ಸಂಬಂಧ ಕೆಪಿಎಸ್‌ಸಿಗೆ ಸೂಕ್ತ ಸೂಚನೆ ನೀಡಲು ತೀರ್ಮಾನಿಸಿದೆ. ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ಅವರು ಇತ್ತೀಚೆಗೆ ನೀಡಿದ ವರದಿಯ ಆಧಾರದಲ್ಲಿಯೇ ಮರು ಮೌಲ್ಯ­ಮಾಪನ ಮತ್ತು ಮರು ಸಂದರ್ಶನ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕವನ್ನು ಗೌಪ್ಯವಾಗಿ ಇಡಲಾಗುವುದು. ಸಂದರ್ಶಕರಿಗೆ ಈ ಅಂಕ ತಿಳಿಯದಂತೆ ನೋಡಿಕೊಳ್ಳಲಾ­ಗುವುದು ಎಂದರು. 362 ಪ್ರೊಬೇಷನರಿ ಗೆಜೆಟೆಡ್‌ ಎ ಮತ್ತು ಬಿ ಗ್ರೇಡ್‌ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಿಐಡಿ ತನಿಖೆ ನಡೆಸಲು ಆದೇಶಿಸಲಾಗಿತ್ತು.ಲಂಚ ಸಾಬೀತು: ಉಪ ವಿಭಾಗಾಧಿಕಾರಿ ಮತ್ತು ಡಿವೈಎಎಸ್‌ಪಿ ಹುದ್ದೆಗೆ ದೊಡ್ಡ ಮೊತ್ತದ ಹಣದ ಬೇಡಿಕೆ ಇಡಲಾಗಿತ್ತು ಎಂಬ ಆರೋಪದಲ್ಲಿ ಸತ್ಯಾಂಶವಿದೆ ಎನ್ನುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆ. ಕೆಪಿಎಸ್‌ಸಿ ಹಗರಣ ದಲ್ಲಿ ಭಾಗಿಯಾಗಿ­­ರುವವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗುವುದು. ಅದರ ವಿಚಾರಣೆ ಅದರ ಪಾಡಿಗೆ  ನಡೆಯುತ್ತದೆ ಎಂದು ತಿಳಿಸಿದರು.ಸೈಕಲ್‌ ವಿತರಣೆ: ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯಲ್ಲಿರುವ 8ನೇ ತರಗತಿ ಮಕ್ಕಳಿಗೆ ಸೈಕಲ್‌ ವಿತರಣೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.ಪ್ರೋತ್ಸಾಹ ಧನ: ಹಿಂದುಳಿದ ವರ್ಗ ಗಳ ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಸಿಗದೇ ಇರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ 1500ರಂತೆ 10 ತಿಂಗಳು ಪ್ರೋತ್ಸಾಹಧನ ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry