`ಮರೆಯಾಗಿರುವ ಕನ್ನಡದ ಔಚಿತ್ಯ'

7
ಪ್ರಗತಿ ಮಹಿಳಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

`ಮರೆಯಾಗಿರುವ ಕನ್ನಡದ ಔಚಿತ್ಯ'

Published:
Updated:

ವಿಜಯಪುರ: ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದ ಔಚಿತ್ಯವನ್ನು ಮನವರಿಕೆ ಮಾಡಿಕೊಡುವ ಮಾರ್ಗದರ್ಶಕರ ಅಗತ್ಯವಿದೆ ಎಂದು ವಿಜಯಪುರ ಪ್ರಗತಿ ಮಹಿಳಾ ಪ್ರಾಂಶುಪಾಲ ಪದವಿ ಕಾಲೇಜಿನ ಪ್ರಾಂಶುಪಾಲ ಎನ್. ನಾಗರಾಜ್ ಹೇಳಿದರು.

ಯಲ್ಲಮ್ಮ ದೇವಾಲಯ ರಸ್ತೆಯ ಜೆ.ಎನ್. ಶ್ರಿನಿವಾಸ್ ಅವರ ಮನೆಯಲ್ಲಿ ಇತ್ತೀಚೆಗೆ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಕನ್ನಡ ನಾಡು-ನುಡಿ ಸೇವೆಯಲ್ಲಿ ನಮ್ಮ ಪಾತ್ರ” ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

`ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಶಾಸ್ತ್ರೀಯ ಸ್ಥಾನ ಮಾನ ಪಡೆದರೂ ಕಾರ್ಯರೂಪಕ್ಕೆ ಬಂದಿಲ್ಲ' ಎಂದರು.

ಪುರಸಭೆಯ ಮಾಜಿ ಉಪಾಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, `ಕನ್ನಡ ಭಾಷೆಯನ್ನು ಬಲಪಡಿಸುವ ಸಲುವಾಗಿಯೇ ಒಡೆಯರ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರೂಪು ಗೊಂಡಿತು. ಕನ್ನಡ ಭಾಷೆ ರಾಷ್ಟ್ರೀಕೃತ ಭಾಷೆಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಹ ಕನ್ನಡಿಗರಿಗೆ ಹೆಮ್ಮೆಯ ವಿಷಯ' ಎಂದು ತಿಳಿಸಿದರು.

ವಿಜಯಪುರ ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ಅಶ್ವಿನಿ ವಿನಯ್ ಅವರು ಅಧ್ಯಕ್ಷತೆ ವಹಿಸಿ  ಮಾತನಾಡಿ, `ಜನಪ್ರತಿನಿಧಿಗಳು ನವೆಂಬರ್‌ನಲ್ಲಿ ವೇದಿಕೆ ಭಾಷಣಗಳಿಗೆ ಮಾತ್ರ ಕನ್ನಡಾಭಿಮಾನ ಸೀಮಿತಗೊಳಿಸಿದ್ದು, ಇಂದಿನ ಯುವಜನಾಂಗ ಸಹ ಕನ್ನಡವನ್ನು ಬಳಸುವ ವಿಚಾರದಲ್ಲಿ ಗೊಂದಲದ ನಿಲುವನ್ನು ತಳೆದಿರುವುದು ವಿಷಾದನೀಯ' ಎಂದರು.

ವಿಜಯಪುರ ಕಸಾಪ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭಾ ಸದಸ್ಯ ಎಲ್.ಚಂದ್ರಶೇಖರ್, ರೇಷ್ಮೆ ಇಲಾಖೆಯ ವೆಂಕಟೇಶ್, ಕಲಾವಿದ, ಎಂಪಿಸಿಎಸ್ ಸದಸ್ಯ ಡಿ.ಎಂ. ರಾಮಕೃಷ್ಣಪ್ಪ ಮಾತನಾಡಿದರು.

ಸಾಂಸ್ಕೃತಿಕ ತಂಡದ ಎಂ.ವಿ. ನಾಯ್ಡು ಮತ್ತು ಲಕ್ಷ್ಮಮ್ಮ ದಾಸರ ಪದಗಳು ಮತ್ತು ಕನ್ನಡ ಗೀತೆಗಳನ್ನು ಹಾಡಿದರು. ಕೆ.ಎಚ್.ಚಂದ್ರಶೇಖರ್ ಪ್ರಾರ್ಥಿಸಿದರು. ಚಿದಾನಂದ ಬಿರಾದಾರ್ ನಿರೂಪಿಸಿದರು. ತಾಲ್ಲೂಕು ಕಾರ್ಯದರ್ಶಿ ಚಂದ್ರಶೇಖರ್ ಹಡಪದ್ ಸ್ವಾಗತಿಸಿ, ಪುರಸಭಾ ನಾಮಾಂಕಿತ ಸದಸ್ಯ ಜೆ.ಎಸ್. ನಾಗರಾಜ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry