ಭಾನುವಾರ, ಜನವರಿ 19, 2020
20 °C
ರಾಮಕೃಷ್ಣ ಮಠದ ಸ್ವಾಮೀಜಿ ವಿಷಾದ

ಮರೆಯಾಗುತ್ತಿರುವ ದೇಶಭಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಹತ್ತೊಂಬತ್ತನೆ ಶತ ಮಾನದ ಕೊನೆಯ ವರ್ಷಗ ಳಲ್ಲಿ ಮೊಳಗಿದ ವಿಶ್ವಮಾನವ ವಿವೇಕಾ ನಂದರ ದಿವ್ಯ ವಾಣಿ ಎಲ್ಲಾ ಸಂಸ್ಕೃತಿಗಳ, ಸಮಾಜಗಳ ಜನರ ಹೃದಯ ಮುಟ್ಟಿದೆ ಎಂದು ರಾಮಕೃಷ್ಣ ಮಠದ ತ್ಯಾಗೀಶ್ವ ರಾನಂದ ಸ್ವಾಮೀಜಿ ತಿಳಿಸಿದರು.ಸ್ವಾಮಿ ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ಜಿಲ್ಲಾ ಕ್ರೀಡಾಂ ಗಣದಲ್ಲಿ ರಾಮನಗರದ ಸ್ವಾಮಿ ವಿವೇಕಾನಂದ ರಥಯಾತ್ರಾ ಸಮಿತಿ  ಸೋಮವಾರ ಏರ್ಪಡಿಸಿದ್ದ ಸಾರ್ವ ಜನಿಕ ಸಭೆ ಉದ್ಘಾಟಿಸಿ ಅವರು ಮಾತನಾ ಡಿದರು.‘ಇತ್ತೀಚಿನ ದಿನಗಳಲ್ಲಿ ದೇಶಕ್ಕಾಗಿ ನಾನು ಎಂಬುವವರಿಗಿಂತ ನನಗಾಗಿ ದೇಶ ಎನ್ನುವವರ ಸಂಖ್ಯೆ ಹೆಚ್ಚು ತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಇಂತಹ ಸಂದರ್ಭದಲ್ಲಿ ಯುವಕರಿಗೆ ದೇಶ ಪ್ರೇಮ ತುಂಬು ಕಾರ್ಯ ಮಾಡ ಬೇಕಿದೆ’ ಎಂದು ಅವರು ಕಿವಿಮಾತು ಹೇಳಿದರು.ಶ್ರೀ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಮಾತ ನಾಡಿ, ಕೆಟ್ಟ ಆಲೋಚನೆ, ಸ್ವಾರ್ಥ, ದುರಾಸೆ ಗಳನ್ನು ಬಿಡಬೇಕು. ಸತ್ಯ ವನ್ನು ನುಡಿ ಯಲು ಹೆದರಬಾ ರದು. ಜೀವನದ ಯಶಸ್ಸಿಗೆ ಸತ್ಯ ನಿಷ್ಠೆ, ಪಾವಿತ್ರ್ಯತೆ ಮತ್ತು ನಿಸ್ವಾರ್ಥ ಮನೋಭಾವ ಅಗತ್ಯ ಎಂದು ಹೇಳಿದರು.ಆದಿಚುಂಚನಗಿರಿ ಮಹಾ ಸಂಸ್ಥಾನ ಅಂಧರ ಶಾಲೆಯ ಅನ್ನದಾನೇಶ್ವರ ನಾಥ ಸ್ವಾಮೀಜಿ, ಚಿಕ್ಕಲೂರು ಹೊಸಮಠದ ಸಿದ್ದನಾಗಲಿಂಗ ಸ್ವಾಮಿಜಿ, ನಗರಾಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಗೋವಿಂ ದಯ್ಯ, ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್, ಮಹಿಳಾ ಘಟಕದ ಅಧ್ಯಕ್ಷ ಗಾಯಿತ್ರಿಬಾಯಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ.ಕುಮಾರ್, ಭಾರತ್ ವಿಕಾಸ ಪರಿಷದ್ ಅಧ್ಯಕ್ಷ ಬೋರಲಿಂಗೇಗೌಡ, ಗೌರವಾಧ್ಯಕ್ಷ ಎಂ.ಸಿ. ರಂಗಸ್ವಾಮಿ, ಡಾ.ರಾಜ್‌ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾ.ಶಿ. ಬಸವರಾಜು, ಉಪ ನ್ಯಾಸಕ ಜಿ. ಶಿವಣ್ಣ ಕೊತ್ತೀಪುರ, ಸ್ವಾಮಿ ವಿವೇಕಾನಂದ ರಥಯಾತ್ರಾ ಸಮಿತಿಯ ಪದಾಧಿಕಾರಿಗಳಾದ ಶ್ರೀರಾಮ್ ಹತ್ವಾರ್, ಮಂಜುನಾಥ ಹಂದೆ, ಶೇಷಾದ್ರಿ ಐಯ್ಯರ್, ಬಿ.ಕೆ. ಕೃಷ್ಣಮೂರ್ತಿ, ಸತೀಶ್, ಜಯಣ್ಣ, ಪದ್ಮನಾಭ, ಅನಿಲ್‌ ಬಾಬು, ಪರಮ ಶಿವಯ್ಯ, ಶ್ರೀನಿವಾಸ್, ಸಿದ್ದೋಜಿ ರಾವ್ ಇತರರು ಉಪಸ್ಥಿತರಿದ್ದರು.ಶಿಕ್ಷಕಿ ಎಚ್.ಕೆ. ಶೈಲಾ ನಿರೂ ಪಿಸಿದರು. ಬಿಎಸ್‌ವಿಪಿ ವಿದ್ಯಾರ್ಥಿ ಗಳು ಪ್ರಾರ್ಥಿಸಿದರು. ಗಾಯಕಿ ಶಶಿಕಲಾ 'ವಂದೇ ಮಾತರಂ' ಹಾಡಿದರು.ರಥಯಾತ್ರೆಗೆ ಚಾಲನೆ: ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರು ಮಿನಿ ವಿಧಾನ ಸೌಧ ಹತ್ತಿರ ರಥಯಾತ್ರೆಗೆ ಚಾಲನೆ ನೀಡಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥಯಾತ್ರೆಯು ಕಾಲೇಜು ಮೈದಾ ನದಲ್ಲಿ ಸಮಾವೇಶಗೊಂ ಡಿತು.

ಪ್ರತಿಕ್ರಿಯಿಸಿ (+)