ಮರೆವು ಅರಿವು ಪ್ರಚಾರ ಆರಂಭ

7

ಮರೆವು ಅರಿವು ಪ್ರಚಾರ ಆರಂಭ

Published:
Updated:
ಮರೆವು ಅರಿವು ಪ್ರಚಾರ ಆರಂಭ

ಬೆಂಗಳೂರು: ವಯಸ್ಸಾದವರಲ್ಲಿ ಕಂಡು ಬರುವ ಮರೆವಿನ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡಲು ನೈಟಿಂಗೇಲ್ ಸಂಸ್ಥೆಯು ಸೆ.21ರಿಂದ 23ರವರೆಗೆ ನಗರದಲ್ಲಿ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.`ವಿಶ್ವ ಅಲ್ಜೀಮರ್ಸ್‌ (ಮರೆವು) ದಿನಾಚರಣೆ~ ಅಂಗವಾಗಿ ನಗರದಲ್ಲಿ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತರಾವ್ ಅವರು, ಸಂಸ್ಥೆಯ ತಪಾಸಣೆ ಮತ್ತು ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಚ್ಯುತರಾವ್, `ವ್ಯಕ್ತಿಗಳಲ್ಲಿ ಮರೆವು ಆರಂಭದಲ್ಲಿ ತಮಾಷೆಯಂತೆ ಕಂಡು ಬಂದರೂ ಮುಂದಿನ ದಿನಗಳಲ್ಲಿ ಗಂಭೀರವಾಗುತ್ತದೆ. ದೇಶದಲ್ಲಿ ಸುಮಾರು 40 ಲಕ್ಷ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ. ರೋಗಿಗಳನ್ನು ನೋಡಿಕೊಳ್ಳುವವರಿಗೇ ಸೂಕ್ತ ತರಬೇತಿ ನೀಡುವ ಅಗತ್ಯವಿದೆ~ ಎಂದು ಹೇಳಿದರು.ನಂತರ ಮಾತನಾಡಿದ ಸಂಸ್ಥೆಯ ಸದಸ್ಯೆ ಉಮಾ ಮೂರ್ತಿ, `ಶಾಂತಿನಗರ ಮತ್ತು ಮಲ್ಲೇಶ್ವರದಲ್ಲಿರುವ ಎರಡು ಕೇಂದ್ರಗಳ ಮೂಲಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಶಾಂತಿನಗರದಲ್ಲಿ ಅಂಗವಿಕಲರಿಗಾಗಿ ಮತ್ತು ಮಲ್ಲೇಶ್ವರದಲ್ಲಿ ಸಾಮಾನ್ಯರಿಗೆ ಯೋಗ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೇವೆ. ಸೂಕ್ತ ತರಬೇತಿ ಪಡೆದ 15 ಜನಗಳ ತಂಡವು ಈ ಸಮಸ್ಯೆ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡುತ್ತದೆ. ಮೂರು ದಿನಗಳ ಕಾಲ ಸಂಚರಿಸುವ ವಾಹನವು ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿರುವ ಹಿರಿಯ ರೋಗಿಗಳ ತಪಾಸಣೆ ನಡೆಸಲಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry