ಸೋಮವಾರ, ನವೆಂಬರ್ 18, 2019
20 °C

ಮರ್ಕಲ್ ಗ್ರಾ.ಪಂ: ಚುನಾವಣೆ ಬಹಿಷ್ಕಾರ ಬ್ಯಾನರ್ ಪತ್ತೆ

Published:
Updated:

ಶೃಂಗೇರಿ:  ತಾಲೂಕಿನ ಮರ್ಕಲ್ ಗ್ರಾಮ ಪಂಚಾಯತಿಯ ಹುಲ್ಸೆ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿರುವ ಬ್ಯಾನರ್ ಗುರುವಾರ ಮುಂಜಾನೆ ಪತ್ತೆಯಾಗಿದೆ. ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಬ್ಯಾನರ್‌ನಲ್ಲಿ ಸಿಪಿಐ ಮಾವೋವಾದಿ ಎಂದು ಬರೆಯಲಾಗಿದ್ದು, ನಕ್ಸಲರು ಕಟ್ಟಿರಬಹುದೆಂದು ಶಂಕಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದ ಅಂಚಿನಲ್ಲಿರುವ ಮಾವಿನಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಈ ಹಿಂದೆ ಪರ್ಯಾಯ ಆಡಳಿತ ನಡೆಸುವಷ್ಟು ಪ್ರಬಲವಾಗಿದ್ದ ನಕ್ಸಲರ ಪ್ರಭಾವ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಾ ಬಂದಿತ್ತು. ಇದೀಗ ಪುನಃ ಬ್ಯಾನರ್ ಕಂಡು ಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಘಟನೆ ನಡೆಸ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರತಿಕ್ರಿಯಿಸಿ (+)