ಶನಿವಾರ, ಅಕ್ಟೋಬರ್ 19, 2019
27 °C

ಮರ್ಯಾದಾ ಹತ್ಯೆ: ನಾಲ್ವರ ಬಂಧನ

Published:
Updated:

ಮಂಡ್ಯ: ಆಬಲವಾಡಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ತಿಮ್ಮೇಶ್ ಹೆಸರಿನ ಇಬ್ಬರು ಮತ್ತು ರಾಜು, ರವಿ ಎಂದು ಗುರುತಿಸಲಾಗಿದೆ.ಇವರನ್ನು ಮೈಸೂರಿನ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದು, ಮಂಡ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರ ವಿಚಾರಣೆ ನಡೆಯುತ್ತಿದೆ. ಸದ್ಯ ಯಾವುದೇ ವಿವರ ಹೊರಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post Comments (+)