ಭಾನುವಾರ, ಅಕ್ಟೋಬರ್ 20, 2019
27 °C

ಮರ್ಯಾದಾ ಹತ್ಯೆ: ಸಚಿವರ ಹೇಳಿಕೆಗೆ ಆಕ್ಷೇಪ

Published:
Updated:

ಮದ್ದೂರು: ಆಬಲವಾಡಿಯಲ್ಲಿ ನಡೆದಿ ರುವುದು ಮಾರ್ಯದಾ ಹತ್ಯೆಯಲ್ಲ. ಅದು ಯುವತಿಯ ಆತ್ಮಹತ್ಯೆ ಎಂದು ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಆರ್. ಅಶೋಕ್ ಅವರು ಇಡೀ ಘಟನೆಯನ್ನು ಮರೆಮಾಚಲು ಹೊರಟಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಗೌರಮ್ಮ ಗುರುವಾರ ದೂರಿದರು.ತಾಲ್ಲೂಕಿನ ಆಬಲವಾಡಿಗೆ ಭೇಟಿ ನೀಡಿದ ಅವರು, ಮಾರ್ಯಾದೆ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮದ ಜನರನ್ನು ಭೇಟಿ ಮಾಡಿ ವಿಚಾರಣೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಘಟನೆಯ ಸತ್ಯಾಸತ್ಯತೆ ಪರಿಶೀಲಿಸ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಈ ಮೂಲಕ ಇಡೀ ಘಟನೆ ಯನ್ನು ದಿಕ್ಕು ತಪ್ಪಿಸಲು ಹೊರಟಿರು ವುದು ಸರಿಯಲ್ಲ. ಅವರಿಗೆ ನೈತಿಕತೆ ಇದ್ದರೆ ಕೂಡಲೇ ಘಟನೆಯ ಬಗೆಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ಗುಜರಾತ್, ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಮಾರ್ಯದೆ ಹತ್ಯೆ ಈಗ ರಾಜ್ಯಕ್ಕೂ ಕಾಲಿಟ್ಟಿರುವುದು ದುರಂತದ ಸಂಗತಿ. ಮಡೆಸ್ನಾನದ ಬಗೆಗೆ ರಾಜ್ಯದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ಬೆಂಬಲಿಸಿ ಮಾತನಾಡುವುದನ್ನು ನೋಡಿದರೆ, ಮಾರ್ಯಾದೆ ಹತ್ಯೆಯು ಈ ಸರ್ಕಾರದ ಮೇಲೆ ಯಾವ ಪರಿಣಾಮ ಬೀರದು ಎಂದು ಅವರು ವ್ಯಂಗ್ಯವಾಡಿದರು. ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಭರತ್‌ಕುಮಾರ್ ಮಾತನಾಡಿ, ಆಬಲವಾಡಿಯಲ್ಲಿ ನಡೆದ ಈ ಹೀನ ಕೃತ್ಯಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಕಾರಣ. ದಲಿತ ಕುಟುಂಬಕ್ಕೆ ಹಾಕಲಾಗಿರುವ ಬಹಿ ಷ್ಕಾರ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.ಸಂಘಟನೆಯ ದೇವಿ, ಶೋಭ, ಸುನೀತ, ಡಿವೈಎಫ್‌ಐ ಸಂಘಟನೆಯ ಕೃಷ್ಣ, ಲಿಂಗರಾಜು, ಸಿಐಟಿಯುನ ರಮೇಶ್, ಪುಟ್ಟಸ್ವಾಮಿ ಇದ್ದರು.

Post Comments (+)