ಭಾನುವಾರ, ಮೇ 9, 2021
27 °C
ವಿದ್ಯುತ್ ಕಣ್ಣಾಮುಚ್ಚಾಲೆ: ಹಲವು ಗ್ರಾಮಗಳು ಕತ್ತಲಲ್ಲೇ

ಮರ ಉರುಳಿ ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಾದ್ಯಂತ ಸೋಮವಾರ ಬಿದ್ದ ಮಳೆ ಹಾಗೂ ಬರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದು ಮನೆ ಜಖಂಗೊಂಡಿರುವ ಘಟನೆ ಕಾರ್ಮಡು ಸಮೀಪದ ದಾಳಿಂಬೆ ಗಿರಿಜನ ಹಾಡಿಯಲ್ಲಿ ಜರುಗಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹತ ಸಂಭವಿಸಿಲ್ಲ.ಮನೆಯ ಒಡತಿ ಜೇನುಕುರುಬರ ಗೌರಿ ಸೋಮವಾರ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಮರ ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಯ ಹಿಂಭಾಗದ ಶೌಚಾಲಯ ಹಾಗೂ ಹೆಂಚು, ಮನೆಯ ಜಂತಿಗೆ ಹಾನಿಯಾಗಿದೆ.  ಮನೆಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್‌ತಂತಿಯ ಮೇಲೆ ಮರ ಬಿದ್ದುದರಿಂದ ಮನೆಗೆ ಹೆಚ್ಚಿನ ಹಾನಿಯಾಗುವುದು ತಪ್ಪಿದೆ.   ಆದರೆ  ಮರವನ್ನು ಕಡಿದು ತೆರವು ಗೊಳಸಲು ವಿದ್ಯುತ್ ತಂತಿ ಆತಂಕ ಮೂಡಿಸಿದೆ.ಶ್ರೀಮಂಗಲ ವಿದ್ಯುತ್ ಕೇಂದ್ರದ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಲೈನ್‌ಮನ್ ಕೂಡ ಇತ್ತ ತಿರುಗಿ ನೋಡಿಲ್ಲ ಎಂದು ತಮ್ಮ ನೋವು ತೋಡಿಕೊಂಡರು ಮನೆ ಒಡತಿ ಗೌರಿ. ಸೋಮವಾರ ಬಾಳೆಲೆ ನಾಡಕಚೇರಿಯ ಕಂದಾಯಾಧಿಕಾರಿ  ಟಿ.ಸಿ.ಚಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.ಇದೇ ರೀತಿ ಬಿರುನಾಣಿ, ಹುದಿಕೇರಿ, ಶ್ರೀಮಂಗಲ ಟಿ.ಶೆಟ್ಟಿಗೇರಿ ಇತರೆಡೆ ಎಲ್ಲೆಂದರಲ್ಲಿ ವಿದ್ಯುತ್  ಮಾರ್ಗದ ಮೇಲೆ ಮರ ಬಿದ್ದು   ಹಲವು ಗ್ರಾಮಗಳು ವಾರದಿಂದ ಕತ್ತಲಲ್ಲಿ ಮಳುಗಿವೆ.  ವಿದ್ಯುತ್ ಕೊರತೆಯಿಂದ ಬೆಳಕು, ನೀರು, ದೂರವಾಣಿ ಎಲ್ಲದಕ್ಕು ಸಮಸ್ಯೆ ಎದುರಾಗಿದೆ. ಆದರೆ ಈ ಬಾರಿ  ಜನತೆಯ ಕಷ್ಟವನ್ನು ಕೇಳುವರೇ ಇಲ್ಲವಾಗಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮಡುಗಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.