ಗುರುವಾರ , ಮೇ 13, 2021
39 °C

`ಮರ ಕಡಿದರೆ ತಾಯಿ ಕೊಲೆ ಮಾಡಿದಂತೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಮರಗಳನ್ನು ಕಡಿದರೆ ಹೆತ್ತ ತಾಯಿಯನ್ನು ಕೊಲೆ ಮಾಡಿದಂತೆ. ಮರಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ತತ್ವದೊಂದಿಗೆ ಪ್ರತಿಯೊಬ್ಬರು ಮರಗಳ ರಕ್ಷಣೆಗೆ ಮುಂದಾಗಬೇಕು ಎಂದು ಕನವಳ್ಳಿ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಬಸವರಾಜ ಮಮದಾಪುರ ಹೇಳಿದರು.ತಾಲ್ಲೂಕಿನ ಯಲಗಚ್ಚ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಭಾರಿ ಪ್ರಮಾಣದಲ್ಲಿ ಪರಿಸರ ವಿನಾಶದ ಅಂಚು ತಲುಪಿದೆ. ಈ ಕಾರಣಕ್ಕಾಗಿಯೇ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಅಲ್ಲದೇ, ಮರ ಕಡಿಯುವುದರಿಂದ ಹಸಿರುಮನೆ ಪರಿಣಾಮ, ಅ್ಯಸಿಡ್ ಮಳೆ ಹಾಗೂ ಪೃತ್ವಿಯ ತಾಪಮಾನ ಅಧಿಕವಾಗುತ್ತಿದೆ  ಎಂದು ವಿಷಾದಿಸಿದರು.`ಪರಿಸರದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಪರಿಹರಿಸಲಿರುವ ಏಕೈಕ ಮಾರ್ಗವೆಂದರೆ ಪರಿಸರ ರಕ್ಷಣೆ. ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿ ಹಾಗೂ ತಂಪಾಗಿ ಇಡುವುದು ನಮ್ಮೆಲರ‌್ಲ ಕರ್ತವ್ಯ. ಇಂದು ಕಾಡಿನ ಪರಿಸರವನ್ನು ನಾವು ರಕ್ಷಿಸಿದರೇ, ಮುಂದೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಆದ್ದರಿಂದ ಹೆಚ್ಚೆಚ್ಚು ಮರಗಳನ್ನು ಬೆಳೆದು ಪರಿಸರ ಸ್ನೇಹಿಗಳಾಗಿ ಬಾಳಬೇಕು' ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಸ್.ವಿ. ಅಜಗೊಂಡ್ರ ಮಾತನಾಡಿ, ಸಾಲುಮರದ ತಿಮ್ಮಕ್ಕ ಹಾಗೂ ಸುಂದರಲಾಲ್ ಬಹುಗುಣ ಅವರು ತೋರಿದ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೆಲ, ಜಲ, ಗಾಳಿ, ಪ್ರಕೃತಿ ನಮಗೆ ಕೊಟ್ಟಿರುವ ಅಮೂಲ್ಯ ಸಂಪನ್ಮೂಲಗಳಾಗಿವೆ. ಈ ಸಂಪನ್ಮೂಲಗಳ ಉಳಿಕೆಗೆ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕಿದೆ ಎಂದು ಹೇಳಿದರು.ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಮೂಕಪ್ಪ ದೇಸಾಯಿ, ಸದಸ್ಯ ಆಜಾದ  ಮುಲ್ಲಾ, ವಿರೂಪಾಕ್ಷಪ್ಪ ಪೂಜಾರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶಿಕ್ಷಕ ಪಿ.ಸಿ. ಲಮಾಣಿ ಸ್ವಾಗತಿಸಿದರು. ಎಂ.ಪಿ.ಗಡ್ಡದ ನಿರೂಪಿಸಿದರು. ಕೆ.ಸಿ. ಕೋರಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.