ಭಾನುವಾರ, ಜೂನ್ 20, 2021
21 °C

ಮರ ಬಿದ್ದು ಮೂರು ವಿದ್ಯಾರ್ಥಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಗ್ಲಿ (ಚಿಕ್ಕೋಡಿ): ಮಹಾರಾಷ್ಟ್ರದ ಮಿರಜ ಪಟ್ಟಣದಿಂದ ಅಷ್ಟಾದ ಕಡೆಗೆ  ಸಾಗುತ್ತಿದ್ದ  ಅಣ್ಣಾಸಾಹೇಬ ಡಾಂಗೆ ಎಂಜಿನಿಯರಿಂಗ್ ಕಾಲೇಜು ಬಸ್ಸಿನ ಮೇಲೆ ಆಲದ ಮರವೊಂದು ಉರುಳಿ ಬ್ದ್ದಿದು ಮೂರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಂಗ್ಲಿ-ಮಿರಜ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಮಿರಜ ನಿವಾಸಿಗಳಾದ ಗಣೇಶ ಮಹೇಶ ಪ್ರಯಾಗ (21), ಅಮೀತ ಮಾರುತಿ ಮಾಸಾಳ (21) ಮತ್ತು ಕೊಲ್ಲಾಪುರದ ಆಸಾವರಿ ಶ್ರೀರಂಗ ಕಾಂಬಳೆ (21) ಮೃತಪಟ್ಟ ವಿದ್ಯಾರ್ಥಿಗಳು.ಘಟನೆಯಲ್ಲಿ ಚಾಲಕ ರಾಜೇಂದ್ರ ಹಿಂದುರಾವ ಜಾಧವ (34) ಹಾಗೂ ವಿದ್ಯಾರ್ಥಿಗಳಾದ ಅಂಕೀತ ದತ್ತು ಗಲಾಂಡೆ (18), ಸೋಫೀಯಾ ಇಕ್ಬಾಲ್ ನಾಯಕವಾಡಿ (21), ಹರ್ಷದ ವಿನಾಯಕ ಚಿಕ್ಕೋಡೆ (21) ಮತ್ತು ಅಜೀಂಕ್ಯ ಭೂಪಾಲ ಮಹಾಜನ (20)  ಗಾಯಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವೀಂದ್ರ ಶಿಶವೆ, ಅಪರ ಜಿಲ್ಲಾ ಪೊಲೀಸ್ ವರಿಷ್ಠ ಡಾ.ದಿಗಂಬರ ಪ್ರಧಾನ, ಜಿಲ್ಲಾಧಿಕಾರಿ ಶ್ಯಾಮ ವರ್ಧನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಂಗ್ಲಿಯ ವಿಶ್ರಾಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.