ಮರ ಬಿದ್ದು ವಾಹನಗಳು ಜಖಂ

7

ಮರ ಬಿದ್ದು ವಾಹನಗಳು ಜಖಂ

Published:
Updated:

ಬೆಂಗಳೂರು: ಮರವೊಂದು ಆಕಸ್ಮಿಕವಾಗಿ ಉರುಳಿ ಬಿದ್ದು ನಾಲ್ಕು ವಾಹನಗಳು ಜಖಂಗೊಂಡಿರುವ ಘಟನೆ ಮಲ್ಲೇಶ್ವರದ ಟೆಂಪಲ್ ಸ್ಟ್ರೀಟ್‌ನಲ್ಲಿ ಭಾನುವಾರ ಸಂಭವಿಸಿದೆ.`ಮಧ್ಯಾಹ್ನ 11.30ರ ಸುಮಾರಿಗೆ ಮರ ಉರುಳಿ ಎಲೆಕ್ಟ್ರಿಕ್ ತಂತಿಗಳ ಮೇಲೆ ಬಿದ್ದಿದೆ. ವೈಯರ್‌ನ ಸೆಳೆತದಿಂದ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.ಇದರಿಂದ ಮನೆಯೊಂದರ ಕಾಂಪೌಂಡ್ ಹಾಗೂ ಹೋಟೆಲ್‌ನ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಎರಡು ಕಾರುಗಳು, ಒಂದು ದ್ವಿಚಕ್ರ ವಾಹನ ಮತ್ತು ಒಂದು ಬೈಕ್ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ~ ಎಂದು ಪೊಲೀಸರು ತಿಳಿಸಿದರು.`ದ್ವಿಚಕ್ರ ವಾಹನದಲ್ಲಿ ಬಂದವರು ಆಗ ತಾನೆ ವಾಹನ ನಿಲ್ಲಿಸಿ ಮನೆಯೊಳಗೆ ಹೋಗಿದ್ದರು. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಯಿತು. ಘಟನೆಯಿಂದ ಮಲ್ಲೇಶ್ವರದ ಸುತ್ತಮುತ್ತಲ ರಸ್ತೆಗಳಲ್ಲಿ ಸುಮಾರು ಒಂದೂವರೆ ಗಂಟೆ  ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಬೆಸ್ಕಾಂ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಮರ ಹಾಗೂ ಕಂಬಗಳ ತೆರವು ಕಾರ್ಯ ಮಾಡಿ ಸಂಚಾರ ಸುಗಮಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry