ಮಲಘಾಣ: ಮತ್ತೆ ಭೂಕಂಪ

7

ಮಲಘಾಣ: ಮತ್ತೆ ಭೂಕಂಪ

Published:
Updated:ಆಲಮಟ್ಟಿ: ಇಲ್ಲಿಗೆ ಸಮೀಪದ ಮಲಘಾಣ ಸುತ್ತಮುತ್ತ ಬುಧವಾರ ಮಧ್ಯರಾತ್ರಿ (ಫೆ. 2) ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.2 ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ರಾಜ್ಯ ನಿರ್ದೇಶಕ ಡಾ. ಪ್ರಕಾಶ ತಿಳಿಸಿದ್ದಾರೆ. ಆದರೆ ಈ ಬಾರಿ ಭೂಕಂಪದ ಕೇಂದ್ರ ಮಲಘಾಣ ಸಮೀಪದ ನಾಲ್ಕು ಕಿ.ಮೀ. ಅಂತರದ ಮುತ್ತಲದಿನ್ನಿಯಲ್ಲಿ ಆಗಿದೆ.ಕಳೆದ ಒಂದು ವರ್ಷದಲ್ಲಿ ಇದು 25ನೇ ಭೂಕಂಪ ಆಗಿದೆ. ಈ ಸರಣಿ ಭೂಕಂಪಕ್ಕೆ ಕಾರಣವಾದರೂ ಏನು ಎಂಬುದು ನಿಗೂಢವಾಗಿಯೇ ಉಳಿದಿದೆ. ಈ ಬಾರಿ ಮಲಘಾಣ, ತಳೇವಾಡ, ಮಸೂತಿ, ಮುತ್ತಲದಿನ್ನಿ ಗ್ರಾಮದವರಿಗೂ ಭೂಕಂಪದ ಅನುಭವವಾಗಿದೆ. ಈ ಬಾರಿ ಸಂಭವಿಸಿರುವ ಭೂಕಂಪ ಆಲಮಟ್ಟಿ, ಸೂಪಾ, ರಾಯಚೂರ, ಗುಲಬರ್ಗಾದಲ್ಲಿನ ಭೂಕಂಪ ಮಾಪಕದಲ್ಲಿ ದಾಖಲಾಗಿದೆ. ಆದರೆ ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದು ಡಾ. ಪ್ರಕಾಶ ತಿಳಿಸಿದ್ದಾರೆ.’ಮಲಘಾಣ, ಕಲಗುರ್ಕಿ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಈ ರೀತಿ ಭೂಕಂಪ ಮೇಲಿಂದ ಮೇಲೆ ಸಂಭವಿಸುತ್ತಿತ್ತು. ಈ ರೀತಿ ಲಘು ಭೂಕಂಪ ಸಂಭವಿಸುತ್ತಿದ್ದು, ಡಂ ಎಂಬ ಶಬ್ದ ಬರುತ್ತಿದ್ದು, ನಂತರ ಕೆಲ ಸೆಕೆಂಡ್‌ಗಳ ಕಾಲ ಭೂಮಿ ನಡಗುತ್ತದೆ. ಆದರೆ ಇದನ್ನು ಭೂಕಂಪ ಮಾಪಕ ಗುರುತಿಸುತ್ತಿಲ್ಲ’ ಎಂದು ಗ್ರಾಮದ ರಮೇಶಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.ಭೂಕಂಪ ಸಂಭವಿಸುತ್ತಿರುವ ಈ ಸ್ಥಳಗಳು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ 20 ಕಿ.ಮೀ ಅಂತರದಲ್ಲಿ ಹಾಗೂ ಕೇಂದ್ರ ಸರಕಾರದ ಎನ್.ಟಿ.ಪಿ.ಸಿ. ಸ್ಥಾಪಿಸಲು ಉದ್ದೇಶಿಸಿರುವ ಕೂಡಗಿ ಶಾಖೋತ್ಪನ್ನ ಕೇಂದ್ರದಿಂದ ಕೇವಲ 5 ಕಿ.ಮೀ. ಅಂತರದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry