ಮಲತಂದೆಯಿಂದ ಮಗುವಿನ ಮೇಲೆ ಹಲ್ಲೆ

7

ಮಲತಂದೆಯಿಂದ ಮಗುವಿನ ಮೇಲೆ ಹಲ್ಲೆ

Published:
Updated:

ಜೋಧ್‌ಪುರ(ಐಎಎನ್‌ಎಸ್): ಮಲತಂದೆಯಿಂದ ಗಂಭೀರವಾಗಿ ಥಳಿತಕ್ಕೊಳಗಾದ ಮೂರು ವರ್ಷದ ಮಗು ಸನ್ಯಂ ಜೈನ್ ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಕುಡಿದ ಅಮಲಿನಲ್ಲಿ ಮಲತಂದೆ ಕೈಲಾಶ್ ಜೈನ್, ಸನ್ಯಂ ಮುಖಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದಾನೆ. ವಿಪರೀತವಾಗಿ ಥಳಿಸಿರುವ ಆತ ಮಗುವಿನ ದೇಹಗಳನ್ನು ಉಗುರಿನಿಂದ ಪರಚಿ ಎತ್ತಿ ಎಸೆದಿದ್ದಾನೆ. ಮಗುವಿನ ಕಾಲು ಕೈ ಮುರಿದಿದೆ. ಮೂರ್ಛೆ ತಪ್ಪಿದ ಮಗುವನ್ನು ಗುರುವಾರ ಇಲ್ಲಿನ ಉಮ್ಮದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಪರೀತವಾಗಿ ಕುಡಿಯುತ್ತಿದ್ದ ಪತಿ ಕೈಲಾಶ್‌ನ್ನು ಬಿಟ್ಟು ಸನ್ಯಂ ತಾಯಿ ನಿಧಿ ಜೈನ್ ಬೇರೆ ವಿವಾಹವಾಗಿದ್ದಳು. ಸನ್ಯಂ ಜನಿಸಿದ ನಂತರ ಕುಡಿತ ಬಿಡುವುದಾಗಿ ತಿಳಿಸಿ ಆಕೆಯನ್ನು ಕೈಲಾಶ್ ವಾಪಸ್ ಮನೆಗೆ ಕರೆತಂದಿದ್ದ. ಕೈಲಾಶ್ ಸನ್ಯಂಗೆ ಮೊದಲಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಮತ್ತು ಆಹಾರ ನೀಡಲು ಬಿಡುತ್ತಿರಲಿಲ್ಲ ಎಂದು ನಿಧಿ ದೂರಿನಲ್ಲಿ ತಿಳಿಸಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry