ಮಲಬಾರ್‌ನಲ್ಲಿ ವಜ್ರಾಭರಣ ಪ್ರದರ್ಶನ

7

ಮಲಬಾರ್‌ನಲ್ಲಿ ವಜ್ರಾಭರಣ ಪ್ರದರ್ಶನ

Published:
Updated:

ಹುಬ್ಬಳ್ಳಿ: ನಗರದ ಮಲಬಾರ್ ಆಭರಣ ಮಳಿಗೆಯಲ್ಲಿ ಭಾನುವಾರ `ಮೈನ್~ ವಜ್ರಾಭರಣಗಳ ಪ್ರದರ್ಶನವನ್ನು ಚಿತ್ರನಟಿ ರಾಗಿಣಿ ಉದ್ಘಾಟಿಸಿದರು. ತಾವು ಸಹ ಮಲಬಾರ್ ಮಳಿಗೆಯ ಗ್ರಾಹಕರಾಗಿದ್ದು, ಉತ್ತಮ ಬ್ರಾಂಡ್‌ನ ಉತ್ಪನ್ನಗಳು ದೊರೆಯುತ್ತವೆ ಎಂದರು.ನವೆಂಬರ್ 1ರವರೆಗೆ ಪ್ರದರ್ಶನ ನಡೆಯಲಿದೆ. ಮದುವೆಗೆಂದೇ ಸಿದ್ಧಪಡಿಸಿದ ಆಭರಣಗಳ ಜೊತೆಗೆ ನಿತ್ಯಬಳಕೆಯ ಹಾಗೂ ಹಗುರವಾದ ಪ್ಲಾಟಿನಂ ಮತ್ತು ವಜ್ರದ ಆಭರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಈ ಸಂದರ್ಭ ಖರೀದಿಸುವ ಪ್ರತಿ ಆಭರಣಕ್ಕೂ ಜೀವನ ಪರ್ಯಂತ ಉಚಿತ ಸೇವೆ ದೊರೆಯಲಿದೆ ಎಂದು ಮಲಬಾರ್‌ನ ಕರ್ನಾಟಕ ವಿಭಾಗದ ಪ್ರಧಾನ ನಿರ್ದೇಶಕ ಇಫ್ಲು ರೆಹಮಾನ್ ತಿಳಿಸಿದರು.ಮೈನ್ ನಿರ್ದೇಶಕರಾದ ಜರೀಶ್, ಶಾಲಿನ್ ಶಾ, ಇನಾಯತ್ ಹಾಗೂ ಶಫಿ, ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಏಕಬೋಟೆ ಈ ಸಂದರ್ಭ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry