ಮಲಾಲಾ ಆರೋಗ್ಯ ಚೇತರಿಕೆ

7

ಮಲಾಲಾ ಆರೋಗ್ಯ ಚೇತರಿಕೆ

Published:
Updated:

ಲಂಡನ್ (ಪಿಟಿಐ): `ತಾಲಿಬಾನ್ ಉಗ್ರರ ದಾಳಿಗೆ ತುತ್ತಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಯುಸೂಫ್ ಝಾಯಿ ಇದೀಗ ಬೇರೆಯವರ ಸಹಾಯದಿಂದ ಎದ್ದು ನಿಲ್ಲುವಷ್ಟು ಚೇತರಿಸಿಕೊಂಡಿದ್ದಾಳೆ~ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.`ಮಲಾಲಾ ಸುಧಾರಿಸಿಕೊಳ್ಳುತ್ತಿದ್ದಾಳೆ. ಬರೆಯುತ್ತಿದ್ದಾಳೆ. ಸ್ಪಷ್ಟವಾಗಿ ಮಾತನಾಡುವಂತಾಗಿದ್ದಾಳೆ~ ಎಂದು ಡಾ. ಡೇವಿಡ್ ರೋಸರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕ್ವೀನ್ ಎಲಿಜಬೆತ್ ಮತ್ತು ಬರ್ಮಿಂಗ್‌ಹ್ಯಾಂ ಮಕ್ಕಳ ಆಸ್ಪತ್ರೆಯ ವೈದ್ಯರ ತಂಡವು ಮಲಾಲಾ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಮಲಾಲಾ ಚೇತರಿಕೆಗೆ ಹಾರೈಸಿ ನೂರಾರು ಜನರು ಆಸ್ಪತ್ರೆಯ ವೆಬ್‌ಸೈಟ್‌ಗೆ ಸಂದೇಶ ರವಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry