ಮಲಾಲಾ ತಂದೆಗೆ ಬ್ರಿಟನ್‌ನಲ್ಲಿ ಉದ್ಯೋಗ

7

ಮಲಾಲಾ ತಂದೆಗೆ ಬ್ರಿಟನ್‌ನಲ್ಲಿ ಉದ್ಯೋಗ

Published:
Updated:
ಮಲಾಲಾ ತಂದೆಗೆ ಬ್ರಿಟನ್‌ನಲ್ಲಿ ಉದ್ಯೋಗ

ಲಂಡನ್(ಪಿಟಿಐ): ಹದಿಹರೆಯದ ಮುಸ್ಲಿಂ ಯುವತಿಯರ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಾಕಿಸ್ತಾನ ಯುವತಿ ಮಲಾಲಾ ತಂದೆಗೆ ಬ್ರಿಟನ್ ಸರ್ಕಾರ ರಾಯಭಾರ ಕಚೇರಿಯಲ್ಲಿ ಉದ್ಯೋಗ ನೀಡಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.ಮಲಾಲಾ ತಂದೆ ಜೈವುದ್ದೀನ್ ಯೂಸಫ್‌ಝಾಯ್ ಅವರನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಪಾಕಿಸ್ತಾನ ಶೈಕ್ಷಣಿಕ ಸಲಹೆಗಾರರನ್ನಾಗಿ ನೇಮಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಉಗ್ರರ ಗುಂಡಿನ ದಾಳಿಗೆ ಒಳಗಾಗಿರುವ ಮಲಾಲಾಗೆ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ಅವರ ತಂದೆ ಈ ಉದ್ಯೋಗದಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry