ಮಲಾಲಾ: ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ

7

ಮಲಾಲಾ: ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ

Published:
Updated:
ಮಲಾಲಾ: ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ

ಇಸ್ಲಾಮಾಬಾದ್ (ಪಿಟಿಐ) :ಮಲಾಲಾ ಯುಸೂಫ್‌ಝಾಯಿ ಮೇಲೆ ದಾಳಿ ನಡೆಸಿದ ತಾಲಿಬಾನ್  ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ.ಕೆಳಮನೆಯಲ್ಲಿ ಮಂಗಳವಾರ ತಾಲಿಬಾನ್ ವಿರುದ್ಧ ನಿರ್ಣಯ ಮಂಡಿಸಲು ಸಜ್ಜಾಗಿದ್ದ ಸರ್ಕಾರದ ನಿರ್ಧಾರಕ್ಕೆ ಒಮ್ಮತ ವ್ಯಕ್ತವಾಗಲಿಲ್ಲ.ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪ್ರಮುಖ ವಿರೋಧ ಪಕ್ಷ ಪಿಎಂಎಲ್-ಎನ್ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪಿಪಿಪಿ ನೇತೃತ್ವದ ಸರ್ಕಾರ ಕೊನೆ ಗಳಿಗೆಯಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

ಸರ್ಕಾರ ಮಂಡಿ ಸಲಿದ್ದ ನಿರ್ಣಯ ದಲ್ಲಿದ್ದ ನಿರ್ದಿಷ್ಟ ಅಂಶಗಳ ಬಗ್ಗೆ ಯಾವುದೇ ನಿಖರವಾದ ಮಾಹಿತಿಗಳು ಬಹಿರಂಗವಾಗಿಲ್ಲ.ಮಲಾಲಾ ಮೇಲೆ ದಾಳಿ ನಡೆಸಿದ ತೆಹ್ರಿಕ್-ಇ-ತಾಲಿಬಾನ್ ಸಂಘಟನೆಯ ಮುಖಂಡ ಮುಲ್ಲಾ ಫಜಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಮಂಗಳವಾರ ಘೋಷಿಸ್ದ್ದಿದರು.

 

ಜೋಲಿ ಮಕ್ಕಳಿಗೆ ಕಥೆ

ಲಾಸ್ ಏಂಜಲೀಸ್: ಮಲಾಲ ಹತ್ಯೆ ಪ್ರಯತ್ನ ಕುರಿತು ತನ್ನ ಮಕ್ಕಳಿಗೆ ವಿವರಿಸುವ ಸಲುವಾಗಿ ತಾನು ಒಂದು ದೊಡ್ಡ ಪ್ರಬಂಧ ಬರೆದಿರುವುದಾಗಿ ಹಾಲಿವುಡ್ ನಟಿ ಏಂಜೆಲಿನಾ ಜೋಲಿ ತಿಳಿಸಿದ್ದಾರೆ.`ಮಕ್ಕಳಿಗೆ ಮಲಾಲಾ ಕಥೆ ಹೇಳಲೇಬೇಕಾಗಿ ಬಂತು. ಬಾಲಕಿಯರಿಗೂ ಶಾಲೆಗೆ ಹೋಗಲು ಅನುಮತಿ ನೀಡಬೇಕೆನ್ನುವ ಮಲಾಲಾಳಂಥ ಮಕ್ಕಳನ್ನು ಕ್ಲ್ಲೊಲುವ ಲೋಕವಿದೆ ಎನ್ನುವುದನ್ನು ಅರಗಿಸಿಕೊಳ್ಳಲು  ಅವರಿಗೆ  ಕಷ್ಟವಾಯಿತು~ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry