ಮಲಾಲ ಮೇಲಿನ ದಾಳಿ ಅತ್ಯಂತ ದುರಂತದ ಸಂಗತಿ: ಒಬಾಮ

7

ಮಲಾಲ ಮೇಲಿನ ದಾಳಿ ಅತ್ಯಂತ ದುರಂತದ ಸಂಗತಿ: ಒಬಾಮ

Published:
Updated:
ಮಲಾಲ ಮೇಲಿನ ದಾಳಿ ಅತ್ಯಂತ ದುರಂತದ ಸಂಗತಿ: ಒಬಾಮ

ವಾಷಿಂಗ್ಟನ್(ಐಎಎನ್‌ಎಸ್) : ~ ನಿಷೇಧಿತ ತಾಲಿಬಾನಿ ಉಗ್ರರ ವಿರುದ್ಧ ದನಿ ಎತ್ತಿ, ದಾಳಿಗೆ ಒಳಗಾದ ಪಾಕಿಸ್ತಾನದ ಹದಿನಾಲ್ಕು ವರ್ಷದ ಬಾಲಕಿ ಮಲಾಲ ಯೂಸಫ್‌ಝೈ ಮೇಲಿನ ದಾಳಿಯು ಅತ್ಯಂತ ಅಸಹ್ಯಕರ ಹಾಗೂ ದುರಂತದ ಸಂಗತಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು  ವೈಟ್‌ಹೌಸ್‌ನಲ್ಲಿ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ದಾಳಿಯ ಬಗ್ಗೆ  ತಿಳಿದ ಒಬಾಮ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದು , ಇದೊಂದು ಕೆಟ್ಟ ಕೃತ್ಯ ಎಂದಿದ್ದಾರೆ.ಮಾಲಾಲ ಯೂಸಫ್‌ಝೈ ಅವರ ಮೇಲೆ ನಡೆದ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೆವೆ ಎಂದು ಒಬಾಮ ಅವರ ವಕ್ತಾರ ಜೇ ಕಾರ್ನೀ ಅವರು  ಹೇಳಿದ್ದಾರೆ. ಅಗತ್ಯ ಬಿದ್ದಲ್ಲಿ ವೈದಕೀಯ ಚಿಕಿತ್ಸೆಗೆ ನೆರವು ನೀಡುವುದಾಗಿ ಅಮೆರಿಕ ಇದೇ ಸಂದರ್ಭದಲ್ಲಿ ಹೇಳಿದೆ. 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry