ಮಲೆನಾಡಿನಲ್ಲಿ ಹದ ಮಳೆ

ಭಾನುವಾರ, ಜೂಲೈ 21, 2019
23 °C

ಮಲೆನಾಡಿನಲ್ಲಿ ಹದ ಮಳೆ

Published:
Updated:

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವದಿಯಲ್ಲಿ ಸಾಧಾರಣ ಮಳೆಯಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆ ಇಳಿ ಮುಖವಾಗಿದೆ.ಸಕಲೇಶಪು ವರದಿ: ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಚುರುಕು ಕಂಡಿವೆ.ಶನಿವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೂ ಸರಾಸರಿ 88 ಮಿ.ಮೀ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ 6.15ರಿಂದ 8ಗಂಟೆಯವರೆಗೆ ಬಿಡುವಿಲ್ಲದೇ (34 ಮಿ.ಮೀ.) ಮಳೆಯಾಗಿದೆ.ಪಶ್ಚಿಮ ಘಟ್ಟದ ಅಂಚಿನಲ್ಲಿರುವ ದೇವಲಕೆರೆ, ಅಗನಿ, ಕಾಡಮನೆ, ಕೆಂಪುಹೊಳೆ, ಹೊಂಗಡಹಳ್ಳ, ಅತ್ತಿಹಳ್ಳಿ, ಬಿಸಿಲೆ, ವಣಗೂರು ಸುತ್ತಮುತ್ತ ದಿನವಿಡೀ ಬಿಡುವಿಲ್ಲದೆ  ಮಳೆಯಾಗುತ್ತಿದೆ. ಬೆಳಗೋಡು ಹಾಗೂ ಕಸಬಾ ಹೋಬಳಿಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ.ಕೊಡಗು ವರದಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದೆ. ಮಡಿಕೇರಿ, ಸಂಪಾಜೆ, ಭಾಗಮಂಡಲ, ಹುದಿಕೇರಿ, ಶ್ರಿಮಂಗಲ, ಅಮ್ಮತ್ತಿ ಸೇರಿದಂತೆ ಜಿಲ್ಲೆಯ ಇತರೆಡೆ ಉತ್ತಮ ಮಳೆಯಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 18.55ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 24.60ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 13.53ಮಿ.ಮೀ. ಮಳೆಯಾಗಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಚುರುಕುಗೊಂಡಿದೆ.  ನೀರಿನ ಮಟ್ಟ:  2,859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2835.95 ಅಡಿಗಳಿಗೆ ಏರಿದೆ.  ಹಾರಂಗಿಯ ಸುತ್ತಮುತ್ತಲ ಪ್ರದೇಶದಲ್ಲಿ 7.20ಮಿ.ಮೀ. ಮಳೆಯಾಗಿದೆ. ಜಲಾಶಯಕ್ಕೆ 2917 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ ಒಳಹರಿವು 6012 ಕ್ಯೂಸೆಕ್ ಇತ್ತು.ಶಿವಮೊಗ್ಗ ವರದಿ: ಜ್ಲ್ಲಿಲೆಯಾದ್ಯಂತ ಸೋಮವಾರ ಸಾಧಾರಣವಾಗಿ ಮಳೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಯ ನೀರಿನಮಟ್ಟ ಎರಡು ಅಡಿ ಹೆಚ್ಚಿದೆ. ಆದರೆ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಮುಖವಾಗಿರುವುದರಿಂದ ಳಹರಿವು 22,683 ಕ್ಯೂಸೆಕ್‌ಗೆ ಇಳಿದಿದೆ.ಅದೇ ರೀತಿ ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದ್ದು, ಜಲಾಶಯಕ್ಕೆ ಒಳಹರಿವು 11,478 ಕ್ಯೂಸೆಕ್ ಇದೆ.ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರಗಳಲ್ಲಿ ಸಾಧಾರಣ ಮಳೆಯಾಗಿದೆ. ಶಿಕಾರಿಪುರ, ಸೊರಬ, ಭದ್ರಾವತಿಗಳಲ್ಲಿ ಮೋಡದ ವಾತಾವರಣವಿದ್ದು, ಅಲ್ಪಸ್ವಲ್ಪ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry