ಮಲೆನಾಡಿನ ಮಕ್ಕಳ ಬಿಸಿಯೂಟಕ್ಕೆತಟ್ಟಿದ ಬಿಸಿ

7

ಮಲೆನಾಡಿನ ಮಕ್ಕಳ ಬಿಸಿಯೂಟಕ್ಕೆತಟ್ಟಿದ ಬಿಸಿ

Published:
Updated:

ನರಸಿಂಹರಾಜಪುರ: ಅಡುಗೆ ಅನಿಲ ಸಿಲಿಂಡರ್ ಕೇಂದ್ರ ಸರ್ಕಾರ ಮಿತಿಗೊಳಿಸಿರುವುದು ಮಲೆ ನಾಡಿನ ಕೆಲವು ಶಾಲೆಗಳಲ್ಲಿ ಬಿಸಿಯೂಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ಅಕ್ಷರ ದಾಸೋಹದ ಕಾರ್ಯಕ್ರಮಕ್ಕೆ ಸಬ್ಸಿಡಿ ದರದ ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ರದ್ದುಪಡಿಸಿರುವುದಾಗಿ  ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ(ಐಓಸಿ)  ಚೀಫ್ ಏರಿಯಾ ಮ್ಯಾನೇಜರ್ ಕಳೆದ ತಿಂಗಳು 17ರಂದು ಎಲ್ಲಾಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ, ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಮಲೆನಾಡು ಭಾಗದಲ್ಲಿ 1ರಿಂದ10 ತರಗತಿಯವರೆಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪ್ರತಿ 50ಮಕ್ಕಳಿಗೆ ತಿಂಗಳಿಗೆ ಒಂದರಂತೆ  ಸಿಲಿಂಡರ್ ಮಿತಿಗೊಳಿಸಿದೆ.  ಮಲೆನಾಡಿನ ಭಾಗದಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದರಿಂದ ಈ ಸಿಲಿಂಡರ್ ಮಿತಿ ಬಿಸಿಯೂಟ ಕಾರ್ಯ ಕ್ರಮಕ್ಕೆ ಮಾರಕವಾಗಲಿದೆ.  ತಾಲ್ಲೂಕಿನಲ್ಲಿ 1 ರಿಂದ10ನೇ ತರಗತಿಯವರೆಗಿನ ಒಟ್ಟು 65 ಶಾಲೆ ಗಳಲ್ಲಿರುವ ಮಕ್ಕಳ ಸಂಖ್ಯೆ 50ಕ್ಕಿಂತ ಕಡಿಮೆ ಇದೆ. 

 

ಹಾಗಾಗಿ ಈ ಶಾಲೆಗಳಿಗೆ ಸರ್ಕಾರ  ಸಿಲಿಂಡರ್ ಪೂರೈಕೆ ಕಡಿತ ಬಿಸಿಯೂಟ ದೊರೆಯದ ಸ್ಥಿತಿ ನಿರ್ಮಾಣವಾಗುವ ಸ್ಥಿತಿಯಿದೆ. ಮಲೆನಾಡಿನ ಭಾಗದಲ್ಲಿ ಸೌದೆ ಲಭ್ಯವಿದ್ದರೂ ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಬಿಸಿಯೂಟ ತಯಾರಿಗೆ ಸೌದೆ ಬಳಸುವಂತಿಲ್ಲ.ಸಹಾಯಧನ ಸಿಲಿಂಡರ್ ಅನ್ನು ಬಿಸಿಯೂಟಕ್ಕೆ ಪೂರೈ ಸುವುದಿಲ್ಲ ಎಂದು ಆದೇಶ ಹೊರಡಿಸಿರುವುದರಿಂದ  ಒಂದು ಸಿಲಿಂಡರ್‌ನ ಬೆಲೆ ತಾಲ್ಲೂಕಿ ನಲ್ಲಿ ರೂ.1147ಕ್ಕಿಂತಲೂ ಹೆಚ್ಚಾಗಲಿದೆ. ಈ ದರವು ಪ್ರತಿ ತಿಂಗಳು ಬದಲಾವಣೆಗೆ ಒಳಪಡುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಬ್ಸಿಡಿ ದರದ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿರುವುದು ಹಾಗೂ ಇದರ ಹೆಚ್ಚುವರಿ ಹಣವನ್ನು ಯಾವರೀತಿ ಭರಿಸುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಬಹುತೇಕ ಶಾಲಾಭಿವೃದ್ಧಿ ಸಮಿತಿಯಲ್ಲಿ ಹೆಚ್ಚಿನ ಹಣವಿಲ್ಲ. ಒಂದು ವೇಳೆ ಹಣವಿದ್ದರೂ ಅದನ್ನು ಬಳಸಲು ಸಾಧ್ಯವಿಲ್ಲ. ಸರ್ಕಾರ ಬಿಸಿಯೂಟ ಕಾರ್ಯಕ್ರಮಕ್ಕೆ ನೀಡುವ ಸಿಲಿಂಡರ್ ಮಿತಿ ವಿಧಿಸಿರುವುದಕ್ಕೆ ಪರಿಹಾರ ಸೂಚಿಸದಿದ್ದರೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜೆ.ಜಿ.ನಾಗರಾಜ್.ಬಿಸಿಯೂಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ  ಸೆಪ್ಟೆಂಬರ್ 14ರಿಂದ 30ರವರೆಗೆ ಸಬ್ಸಿಡಿ ದರದಲ್ಲಿ (ರೂ.406) ಸಿಲಿಂಡರ್‌ಪೂರೈಸಲಾಗಿತ್ತು.ಆದರೆ ಕಂಪೆನಿ ಹೊಸ ಆದೇಶ ಹೊರಡಿಸಿರುವುದರಿಂದ ಈ ಅವಧಿಯಲ್ಲಿ ಪೂರೈಸಲಾಗಿರುವ ಸಿಲಿಂಡರ್‌ಗೂ ರೂ.973 ಪಡೆಯುಂತೆ ಸೂಚಿಸಲಾಗಿದೆ. ಇದನ್ನು ಈಗಾಗಲೇ ಕಂಪೆನಿಗೆ ಭರಿಸಲಾಗಿದ್ದು ಸರ್ಕಾರದ ಅನುದಾನ ಬಿಡುಗಡೆಯಾದ ನಂತರ ಹೆಚ್ಚುವರಿ ಹಣ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುತ್ತಾರೆ ಅಡುಗೆ ಅನಿಲ ವಿತರಕ ಬಿ.ಎಸ್.ಆಶೀಶ್ ಕುಮಾರ್.ಸರ್ಕಾರ ಪ್ರತಿ 50ಮಕ್ಕಳಿಗೆ ಒಂದು ಸಿಲಿಂಡರ್ ಪೂರೈಸುವ ಮಿತಿಯನ್ನು ಮಲೆನಾಡಿನ ಭಾಗದ ಶಾಲೆಗಳಿಗೆ ಕೈಬಿಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಮಂಜುನಾಥ್.

ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ಸಿಲಿಂಡರ್ ಮಿತಿಯ ಸಮಸ್ಯೆ ಉದ್ಭವವಾಗಿಲ್ಲ. ರಜೆ ಮುಗಿಯುವುದರೊಳಗೆ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಮಸ್ಯೆಯ ನೈಜತೆ ಕಂಡು ಬರಲಿದೆ ಎನ್ನುತ್ತಾರೆ ಶಿಕ್ಷಕರು.                                                                                                              

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry