ಮಲೇರಿಯಾ ಚಿಕಿತ್ಸೆಗೆ ಶೀಘ್ರದಲ್ಲಿ ಹೊಸ ವಿಧಾನ

7

ಮಲೇರಿಯಾ ಚಿಕಿತ್ಸೆಗೆ ಶೀಘ್ರದಲ್ಲಿ ಹೊಸ ವಿಧಾನ

Published:
Updated:

ನ್ಯೂಯಾರ್ಕ್‌ (ಐಎಎನ್‌ಎಸ್‌): ಭಾರತ ಮತ್ತು ಆಗ್ನೇಯ ಏಷ್ಯಾ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲೇರಿಯಾಕ್ಕೆ ಕಾರಣ­ವಾಗುವ ರೋಗಾಣು ಕೆಂಪು ರಕ್ತ ಕಣಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ಭಾರತ ಮೂಲದ ವಿಜ್ಞಾನಿಯೊಬ್ಬರು ಪತ್ತೆ ಹಚ್ಚಿದ್ದಾರೆ.ಈ ಬೆಳವಣಿಗೆಯು ಮಲೇರಿಯಾಕ್ಕೆ ಪರಿಣಾಮಕಾರಿ­ ಚಿಕಿತ್ಸೆ ನೀಡುವ ನಿಟ್ಟಿ­ನಲ್ಲಿ ಹೊಸ ಲಸಿಕೆ ಅಭಿವೃದ್ಧಿ ಪಡಿಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಭಾರತ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲೇರಿಯಾದ ಪ್ರಕಾರದಲ್ಲಿ  ಕೆಂಪು ರಕ್ತಕಣಗಳ ಮೇಲೆ ದಾಳಿ ಮಾಡುವ ಪ್ಲಾಸ್ಮೋಡಿಯಂ ವಿವಾಕ್ಸ್‌, (ಮಲೇರಿಯಾಕ್ಕೆ ಕಾರಣ­ವಾಗುವ ಸೂಕ್ಷ್ಮಾಣು ಪರಾವಲಂಬಿ­ಗಳಲ್ಲಿ ಒಂದು) ಕೆಂಪು­ರಕ್ತಕಣ­ಗಳನ್ನು ಕುಗ್ಗಿಸುತ್ತವೆ  ಎಂಬು­ದನ್ನು ಸೇಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಮೆಡಿಸಿನ್‌’ನಲ್ಲಿ ಅಣು ಸೂಕ್ಷ್ಮಜೀವ­ವಿಜ್ಞಾನ ಮತ್ತು ಜೀವ ರಸಾಯನ­ವಿಜ್ಞಾನದ ಸಹಾಯಕ ಫ್ರೊಫೆಸರ್‌ ನೀರಜ್‌ ತೋಲಿಯಾ ಅವರು ಅಧ್ಯಯನ ನಡೆಸಿ ಕಂಡುಕೊಂಡಿದ್ದಾರೆ.ಕೆಂಪುರಕ್ತ ಕಣಗಳ ಮೇಲೆ ಪ್ಲಾಸ್ಮೋಡಿಯಂ ವಿವಾಕ್ಸ್‌ ಮಾಡುವ ದಾಳಿ­ಯನ್ನು ತಡೆಯುವುದಕ್ಕಾಗಿ ಹೊಸ ಲಸಿಕೆ ಅಭಿವೃದ್ಧಿ ಪಡಿಸಲು ನಾವು ಈ ಅಧ್ಯಯನ­ದಿಂದ ತಿಳಿದುಬಂದ ಮಾಹಿತಿ­ಯನ್ನು ಬಳಸುತ್ತೇವೆ ಎಂದು ನೀರಜ್‌ ಹೇಳಿದ್ದಾರೆ.ಮನುಷ್ಯನ ಯಕೃತ್‌ನಲ್ಲಿ ಅವಿತು­ಕೊಳ್ಳುವ ಪ್ಲಾಸ್ಮೋಡಿಯಂ ವಿವಾಕ್ಸ್‌, ಹಲವು ವರ್ಷಗಳ ನಂತರ ಮತ್ತೆ ಮಲೇರಿಯಾ ಉಂಟು­ಮಾಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry