ಗುರುವಾರ , ಮೇ 19, 2022
22 °C

ಮಲೇರಿಯಾ ತಡೆಗೆ ಜಾಗೃತಿ ಅಗತ್ಯ: ಕಾಶೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಚಳಿಜ್ವರ, ತಲೆನೋವು, ಬಿಟ್ಟುಬಿಟ್ಟು ಜ್ವರ ಬರುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಮಲೇರಿಯಾ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಆರೋಗ್ಯ ಸಹಾಯಕ ಎಂ.ಡಿ. ಕಾಶೀಂ ಸಲಹೆ ಮಾಡಿದರು.ಇಲ್ಲಿಗೆ ಸಮೀಪದ ಯರಿಂಗಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಏಕಲವ್ಯ ವಸತಿ ಶಾಲೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಮಲೇರಿಯಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಲೇರಿಯಾ ಜ್ವರ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯಬೇಕು. ಸೊಳ್ಳೆ ಕಡಿತದಿಂದ ಬರುವ ಈ ರೋಗವನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತಲಿನ ವಾತಾವರಣ ಸ್ಪಚ್ಚವಾಗಿಟ್ಟುಕೊಳ್ಳಬೇಕು.

ಸೊಳ್ಳೆ ಪರದೆ ಮತ್ತು ಸೊಳ್ಳೆ ನಿಯಂತ್ರಕ ಬತ್ತಿಗಳನ್ನು ಬಳಸಿ ಮಲೇರಿಯಾದಿಂದ ರಕ್ಷಣೆ ಪಡೆಯಬಹುದು ಎಂದು ಸಲಹೆ ನೀಡಿದರು. ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಯರ‌್ರಿಸ್ವಾಮಿ, ಏಕಲವ್ಯ ವಸತಿ ಶಾಲೆಯ ಪ್ರಾಚಾರ್ಯ ಅನುಸೂಯ, ಆರೋಗ್ಯ ಸಹಾಯಕ ಡಿ.ಕುಮಾರ್‌ಗೌಡ, ಟಿ.ಎಂ. ಮೃತ್ಯುಂಜಯಸ್ವಾಮಿ, ಆಂಜಿನೇಯ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.