ಬುಧವಾರ, ಏಪ್ರಿಲ್ 14, 2021
25 °C

ಮಲೇರಿಯಾ ತಡೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಪಟ್ಟಣದ ಆರೋಗ್ಯ ವಸತಿ ಗೃಹ, ಬೆಸ್ಕಾಂ ಕಚೇರಿ ಹಿಂಭಾಗದ ವಾರ್ಡ್‌ಗಳಿಗೆ ಶುಕ್ರವಾರ ಭೇಟಿ ನೀಡಿದ ಮಲೇರಿಯಾ ಜಿಲ್ಲಾ ಅಧಿಕಾರಿ ಡಾ.ಬಾಬುರೆಡ್ಡಿ, ತಹಶೀಲ್ದಾರ್ ಟಿ.ಎ.ಹನುಮಂತರಾಯ, ಪುರಸಭೆ ಮುಖ್ಯಾಧಿಕಾರಿ ಶ್ರೀಕಾಂತ್ ಚರಂಡಿ ಹಾಗೂ ತೊಟ್ಟಿಗಳಲ್ಲಿರುವ ಸೊಳ್ಳೆಗಳ ಲಾರ್ವಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಮಲೇರಿಯಾ ಜಿಲ್ಲಾ ಅಧಿಕಾರಿ ಡಾ.ಕೆ.ಬಾಬುರೆಡ್ಡಿ, ಮನೆ ಹಾಗೂ ಸುತ್ತಮುತ್ತಲಿರುವ ಚರಂಡಿ ಹಾಗೂ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು. ನೀರನ್ನು ಶೇಖರಿಸುವ ಸಿಮೆಂಟ್, ಕಲ್ಲು, ಚಪ್ಪಡಿಯಿಂದ ನಿರ್ಮಿಸಿರುವ ತೊಟ್ಟಿ, ಡ್ರಂ, ಬ್ಯಾರಲ್ ಮಣ್ಣಿನ ಮಡಿಕೆ, ಟೈರ್‌ಗಳು ಸೊಳ್ಳೆ ಲಾರ್ವಾಗಳ ಅವಾಸ ಸ್ಥಾನ ಆಗಿದೆ.ತೊಟ್ಟಿಯ ನೀರು ಖಾಲಿ ಮಾಡಿ ಒಣಗಿಸಬೇಕು. ಸೊಳ್ಳೆಗಳು ನುಸುಳದಂತೆ ಮುಚ್ಚಬೇಕು. ಸ್ವಯಂರಕ್ಷಣಾ ವಿಧಾನ ಬಳಸಬೇಕು. ಸೊಳ್ಳೆಗಳ ನಿಯಂತ್ರಣ ಡೆಂಗೆ ಹತೋಟಿಯ ಮುಖ್ಯ ವಿಧಾನ ಎಂದರು.

ತಹಶೀಲ್ದಾರ್ ಟಿ.ಎ.ಹನುಮಂತರಾಯ, ಪುರಸಭೆ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿದರು. ಪುರಸಭೆ ಆರೋಗ್ಯ ನಿರೀಕ್ಷಕ ಮುರಳೀಧರ, ಆರೋಗ್ಯ ಇಲಾಖೆ ಸಿಬ್ಬಂದಿ ಸುಬಾನ್‌ಸಾಬ್, ಜಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.