ಶುಕ್ರವಾರ, ಜೂನ್ 25, 2021
29 °C

ಮಲೇಷ್ಯಾ ಓಪನ್‌ಗೆ ಸಿಂಧು ಅಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ಮಾರ್ಚ್‌ 25ರಿಂದ 30ರವರೆಗೆ ಜೋಹರ್‌ ಬಹ್ರುವಿನಲ್ಲಿ ನಡೆಯಲಿರುವ ಮಲೇಷ್ಯಾ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ.ಹೋದ ವರ್ಷ ಸಿಂಧು ಈ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಆದರೆ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸೇರಿದಂತೆ ಸತತ ಟೂರ್ನಿಗಳಲ್ಲಿ ಆಡಿ ದಣಿದಿರುವ ಕಾರಣ ಈ ಗ್ರ್ಯಾನ್‌ ಪ್ರಿನಲ್ಲಿ ಆಡುವುದಿಲ್ಲ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ತಿಳಿಸಿದ್ದಾರೆ.ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸಿಂಧು ಈಗ ಸ್ವಿಟ್ಜರ್‌ಲೆಂಡ್‌ ಓಪನ್‌ನಲ್ಲಿ ಆಡುತ್ತಿದ್ದಾರೆ.  ಏಪ್ರಿಲ್‌ 1ರಿಂದ 6ರವರೆಗೆ ನಡೆಯಲಿರುವ ಇಂಡಿಯಾ ಓಪನ್‌ ಸೂಪರ್‌ ಸರಣಿ, ಏ.8ರಿಂದ 13ರವರೆಗೆ ನಡೆಯಲಿರುವ ಸಿಂಗಪುರ ಓಪನ್‌ ಸೂಪರ್‌ ಸರಣಿಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.