ಸೋಮವಾರ, ಜನವರಿ 20, 2020
19 °C

ಮಲ್ಪೆ: ಬೀಚ್ ಉತ್ಸವ 28ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಉತ್ಸವ ಸಮಿತಿಯ ವತಿಯಿಂದ ಇದೇ 28 ಮತ್ತು 29 ರಂದು ಮಲ್ಪೆಯ ಕಡಲ ತೀರದಲ್ಲಿ `ಬೀಚ್ ಉತ್ಸವ~ ಆಯೋಜಿಸಲಾಗಿದೆ.ಎರಡು ದಿನಗಳ ಈ ಉತ್ಸವದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರಾವಳಿ ಆಹಾರೋತ್ಸವ ನಡೆಯಲಿದೆ.ಇದೇ 28 ರಂದು ಬೆಳಿಗ್ಗೆ 9 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಮೊದಲ ದಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ರೇಸ್, ಪುರುಷ ಮತ್ತು ಮಹಿಳೆಯರ ಬೀಚ್ ಕಬಡ್ಡಿ, ಪುರುಷರ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿವೆ.29 ರಂದು ಬೆಳಿಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಈಜು ಸ್ಪರ್ಧೆ, ಮರಳುಶಿಲ್ಪ ರಚನೆ, ಮಧ್ಯಾಹ್ನ ಶ್ವಾನ ಪ್ರದರ್ಶನ, ಹಳೆ ಮಾದರಿಯ ಕಾರುಗಳ ಪ್ರದರ್ಶನ ಮತ್ತು ಗಾಳಿಪಟ ಪ್ರದರ್ಶನ ನಡೆಯಲಿದೆ.ಎರಡು ದಿನವೂ ಸಂಜೆ 6 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕರಾವಳಿ ಆಹಾರೋತ್ಸವದಲ್ಲಿ, ವಿವಿಧ ಬಗೆಯ ಕಡಲ ಉತ್ಪನ್ನಗಳ ರುಚಿಕರ ಆಹಾರ ತಿಂಡಿ-ತಿನಿಸುಗಳ ಪ್ರದರ್ಶನ ಮತ್ತು ಮಾರಾಟವಿದೆ.ಬೀಚ್ ಉತ್ಸವದ ಸಂಚಾಲಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವರಗಳಿಗೆ ದೂರವಾಣಿ ಸಂಖ್ಯೆ 0820-2520306 ಅಥವಾ 8722800539 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)