ಮಲ್ಯ ಖುದ್ದು ಹಾಜರಿಗೆ ಹೈಕೋರ್ಟ್‍ ಆದೇಶ

7

ಮಲ್ಯ ಖುದ್ದು ಹಾಜರಿಗೆ ಹೈಕೋರ್ಟ್‍ ಆದೇಶ

Published:
Updated:

ಬೆಂಗಳೂರು: ಮದ್ಯದ ದೊರೆ ವಿಜಯ್‌ ಮಲ್ಯ ಅವರ ಕೊರಳಿಗೆ ಸುತ್ತಿಕೊಂಡಿರುವ ಸಾಲದ ಕುಣಿಕೆ ಮತ್ತಷ್ಟು ಬಿಗಿಗೊಂಡಿದೆ. ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಕರಣ ವೊಂದರಲ್ಲಿ ವಿಚಾರಣೆಗೆ ಮಂಗಳ ವಾರ ಪಾಸ್‌ಪೋರ್ಟ್‌ ಸಹಿತ ಖುದ್ದಾಗಿ ಹಾಜರಾಗುವಂತೆ ಮಲ್ಯ ಅವರಿಗೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.ರೋಲ್ಸ್‌ ರಾಯ್ಸ್‌ ಅಂಡ್‌ ಪಾರ್ಟ್ನರ್ಸ್‌ ಫೈನಾನ್ಸ್‌ ಲಿಮಿಟೆಡ್‌ ಮತ್ತು ಇತರ ಕಂಪೆನಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರ ಪೀಠದ ಮುಂದೆ ನಡೆಯಿತು.ಲಂಡನ್‌ ಮೂಲದ ಬಹು­ರಾಷ್ಟ್ರೀಯ ಮದ್ಯ ತಯಾರಿಕಾ ಕಂಪೆನಿ ‘ಡಿಯಾಜಿಯೊ’ ಜೊತೆಗಿನ ವ್ಯವ­ಹಾರದಲ್ಲಿ ಮಾಡಿರುವ ಖರ್ಚುಗಳ ವಿವರ ಸಲ್ಲಿಸಬೇಕು ಎಂದು ಕೋರ್ಟ್‌ ಈ ಹಿಂದೆ ಮಲ್ಯ ಅವರಿಗೆ ಸೂಚನೆ ನೀಡಿತ್ತು. ಆದರೆ ಮಲ್ಯ ಅವರು ಈ ವ್ಯವಹಾರಕ್ಕೆ ಸಂಬಂಧಿಸಿದ ಸೂಕ್ತ ವಿವರಗಳನ್ನು ಇದುವರೆಗೂ ಸಲ್ಲಿಸಿಲ್ಲ ಎಂದು ನ್ಯಾಯಮೂರ್ತಿಯವರು ಅಸಮಾಧಾನ ವ್ಯಕ್ತಪಡಿಸಿದರು.ಆಸ್ತಿಯನ್ನು ಮಾರಿಯಾದರೂ. ₨ 600 ಕೋಟಿ ಸಾಲ ಮರುಪಾವತಿ ಮಾಡುವಂತೆ ಮಲ್ಯ ಅವರಿಗೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry