ಸೋಮವಾರ, ಅಕ್ಟೋಬರ್ 21, 2019
25 °C

ಮಲ್ಲಕಂಬ: ರಾಜ್ಯ ತಂಡದ ಆಯ್ಕೆ

Published:
Updated:

ವಿಜಾಪುರ: ತುಳಸಿಗೇರಿಯ ಅನ್ನಪೂರ್ಣ ದಂಡಿನ, ಅಕ್ಷತಾ ಸೊನ್ನದ ಬಾಲಕಿಯರ ಹಗ್ಗದ ಮಲ್ಲಕಂಬ ವಿಭಾಗದಲ್ಲಿ 12 ವರ್ಷದೊಳಗಿನ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎಂಟು ವಿಭಾಗಗಳಲ್ಲಿ ಒಟ್ಟಾರೆ 32 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಯಿತು.ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಶನಿವಾರದಿಂದ  ನಡೆದ ಆಯ್ಕೆ ಸ್ಪರ್ಧೆಯಲ್ಲಿ 20 ತಂಡಗಳ 236 ಜನ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಹಗ್ಗ ಹಾಗೂ ಕಂಬದ ಮೇಲೆ ಈ ಮಲ್ಲಕಂಬ ಕ್ರೀಡಾಪಟುಗಳು ತೋರಿದ ಸಾಧನೆ ಬೆರಳು ಕಚ್ಚುವಂತಿತ್ತು. ಜಿಲ್ಲಾ ಅಮೆಚೂರ್ ಮಲ್ಲಕಂಬ ಸಂಸ್ಥೆ ಸಹಯೋಗದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಫಲಿತಾಂಶ: ಬಾಲಕಿಯರು: ಹಗ್ಗದ ಮಲ್ಲಕಂಬ: 12 ವರ್ಷದೊಳಗಿನವರು: ಅನ್ನಪೂರ್ಣ ದಂಡಿನ (ತುಳಸಿಗೇರಿ), ಸ್ನೇಹಾ ಜವಳಿಮಠ (ಉಪ್ಪಿನ ಬೆಟಗೇರಿ), ಅಕ್ಷತಾ ಸೊನ್ನದ (ತುಳಸಿಗೇರಿ), ಸಂಪ್ರೀತಾ ಗುಂಜಳ (ಕೋಳಿವಾಡ), ಕಾಯ್ದಿಟ್ಟ ಆಟಗಾರ್ತಿ: ಸುಶ್ಮಿತಾ ದಿವಟಗಿ (ಉಪ್ಪಿನ ಬೆಟಗೇರಿ), 14 ವರ್ಷದೊಳಗಿನವರು: ಶಿಲ್ಪಾ ಅಡಗಲ್, ಲಕ್ಷ್ಮಿ ಚನ್ನದಾಸರ (ಇಬ್ಬರೂ ತುಳಸಿಗೇರಿ), ಸುಷ್ಮಿತಾ ನೀರಲಗಿ (ಉಪ್ಪಿನ ಬೆಟಗೇರಿ), ಮಧು ಬನ್ನಿ (ಗದಗ), ಕಾಯ್ದಿಟ್ಟ ಆಟಗಾರ್ತಿ: ಶಾಜೀದಾ ದೊಡ್ಯಾಳ (ಮಾರನಬಸರಿ).16 ವರ್ಷದೊಳಗಿನವರು: ಹನುಮವ್ವ ದಂಡಿನ (ತುಳಸಿಗೇರಿ), ಸವಿತಾ ನರಗುಂದ (ಉಪ್ಪಿನ ಬೆಟಗೇರಿ), ಭಾಗ್ಯಶ್ರೀ ಮುತ್ತೆಣ್ಣವರ, ಯಲ್ಲವ್ವ ಬೋವಿ (ಇಬ್ಬರೂ ತುಳಸಿಗೇರಿ), ಕಾಯ್ದಿಟ್ಟ ಆಟಗಾರ್ತಿ: ಪವಿತ್ರಾ ಇನಾಮತಿ (ಕೋಳಿವಾಡ), 16 ವರ್ಷ ಮೇಲ್ಪಟ್ಟವರು: ಚೈತ್ರಾ ರಾಜನಾಳ (ತುಳಸಿಗೇರಿ), ಪೂಜಾ ಜವಳಿಮಠ (ಉಪ್ಪಿನ ಬೆಟಗೇರಿ), ಶಾಜಿದಾ ಬಂಡಿವಾಡ (ಹರ್ಲಾಪುರ), ಭಾಗ್ಯಶ್ರೀ ಬಿ. (ತುಳಸಿಗೇರಿ), ಕಾಯ್ದಿಟ್ಟ ಆಟಗಾರ್ತಿ: ಸರಸ್ವತಿ ತಪರೇಶಿ (ತುಳಸಿಗೇರಿ).ಬಾಲಕರು: ಸ್ಥಿರ ಮಲ್ಲಕಂಬ: 12 ವರ್ಷದೊಳಗಿನವರು: ವೀರಭದ್ರಪ್ಪ ಮುಧೋಳ, ಬಾಳೇಶ ಕಾಪ್ಸೆ, ಮಂಜುನಾಥ ಪೂಜಾರ (ಮೂವರೂ ಮೂಡಲಗಿ), ವಿಕ್ರಾಂತ ಕಿಲ್ಲೇದಾರ (ಚಂದರಗಿ), ಕಾಯ್ದಿಟ್ಟ ಆಟಗಾರ: ಫಕ್ಕೀರೇಶ ತಳವಾರ (ಮೂಡಲಗಿ), 14 ವರ್ಷದೊಳಗಿನವರು: ಸುಗುಣಸಾಗರ ವಡ್ರಾಳಿ (ಮೂಡಲಗಿ), ಭೀಮಣ್ಣ ಹಡಪದ, ದುಂಡಪ್ಪ ದಾಸಣ್ಣವರ (ಇಬ್ಬರೂ ತುಳಸಿಗೇರಿ), ಹನುಮಂತ ಸೀತಿಮನಿ (ಮೂಡಲಗಿ), ಕಾಯ್ದಿಟ್ಟ ಆಟಗಾರ: ದಯಾನಂದ ಮೂಡಲಗಿ (ಹಿಡಕಲ್ ಡ್ಯಾಂ).18 ವರ್ಷದೊಳಗಿನವರು: ಬಸವರಾಜ ವಾಮಾ (ಬಾಗಲಕೋಟೆ), ಮಂಜುನಾಥ ಲಾಯಣ್ಣವರ, ಲಕ್ಕಪ್ಪ ಬೆನ್ನೂರ (ಇಬ್ಬರೂ ತುಳಸಿಗೇರಿ), ಅಪ್ಪಾಸಾಹೇಬ ತಳವಾರ (ಚಂದರಗಿ), ಕಾಯ್ದಿಟ್ಟ ಆಟಗಾರ: ಅಜಯಕುಮಾರ್ (ಚಂದರಗಿ), 18 ವರ್ಷ ಮೇಲ್ಪಟ್ಟವರು: ಮಾರುತಿ ಬಾರಕೇರ, ಶ್ರೀಶೈಲ ಹೂಗಾರ (ತುಳಸಿಗೇರಿ), ರಾಮಣ್ಣ ಸೀತಿಮನಿ (ಮೂಡಲಗಿ), ಪರಮಾನಂದ ಮಂಟೂರ (ತುಳಸಿಗೇರಿ), ಕಾಯ್ದಿಟ್ಟ ಆಟಗಾರ: ರವಿ ಕಿಳ್ಳಿ (ಇಬ್ಬರೂ ತುಳಸಿಗೇರಿ).

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)