ಗುರುವಾರ , ನವೆಂಬರ್ 21, 2019
23 °C

ಮಲ್ಲಿಕಾ ಮೆಚ್ಚಿದ ಕರಣ್ ಜೋಹರ್

Published:
Updated:

ಬಾಲಿವುಡ್‌ನಲ್ಲಿರುವ ಸೂಕ್ತ ಅವಿವಾಹಿತರಲ್ಲಿ ಕರಣ್ ಜೋಹರ್ ಅವರಿಗೆ ಅಗ್ರಸ್ಥಾನ ಎಂದು ಘಂಟಾಘೋಷವಾಗಿ ಸಾರಿದ್ದಾರೆ ಮಲ್ಲಿಕಾ ಶೆರಾವತ್. ಡೇಟಿಂಗ್ ಕುರಿತಂತೆ ಆರಂಭವಾಗುತ್ತಿರುವ ಹೊಸ ರಿಯಾಲಿಟಿ ಶೋನ ಕೇಂದ್ರಬಿಂದುವಾಗಿರುವ ಶೆರಾವತ್ ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.ಅಮೆರಿಕದಲ್ಲಿ ಈಗಾಗಲೇ ಪ್ರಸಿದ್ಧವಾಗಿರುವ `ದಿ ಬ್ಯಾಚುಲರ್' ಎಂಬ ಹಿಂದಿಯ ಅವತರಣಿಕೆ `ದ ಬ್ಯಾಚುಲರೇಟ್ ಇಂಡಿಯಾ- ಮೇರೆ ಖಯಾಲೋಂಕಿ ಮಲ್ಲಿಕಾ' ಎಂಬ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿರುವ ಮಲ್ಲಿಕಾಳನ್ನು ಮೆಚ್ಚಿಸುವ ಆಟ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಮಲ್ಲಿಕಾ ಶೆರಾವತ್ ಅವರನ್ನು ಮೆಚ್ಚಿಸಲು 30 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.ಎಲ್ಲವನ್ನೂ ಗಮನಿಸಿದಲ್ಲಿ ಕರಣ್ ಜೋಹರ್ ಅವರೇ ಸೂಕ್ತ ಅವಿವಾಹಿತ ವ್ಯಕ್ತಿ. ನೋಡಲು ಸುಂದರ, ಯಶಸ್ವಿ ನಿರ್ದೇಶಕ ಹಾಗೂ ಎಲ್ಲರೊಳಗೊಂದಾಗುವ ವ್ಯಕ್ತಿ' ಎಂದು ಮಲ್ಲಿಕಾ ಮುಕ್ತಕಂಠದಿಂದ ಕರಣ್ ಅವರನ್ನು ಹೊಗಳಿದ್ದಾರೆ.`ರಾಖಿ ಕಾ ಸ್ವಯಂವರ್' ಎಂಬ ಕಾರ್ಯಕ್ರದಂತೆಯೇ ಇರುವ ಬ್ಯಾಚುಲರ್ ಕಾರ್ಯಕ್ರಮದಲ್ಲಿ ಮಲ್ಲಿಕಾ ಅಭಿನಯದ ಮತ್ತೊಂದು ಮಗ್ಗುಲನ್ನು ನೋಡಬಹುದಾಗಿದೆ. `ಗ್ಲಾಮರ್ ಹಾಗೂ ಗಟ್ಟಿಗಿತ್ತಿ ಪಾತ್ರಗಳಲಿ ನನ್ನನ್ನು ಈಗಾಗಲೇ ನೋಡಿರುವ ವೀಕ್ಷಕರು ಈ ನೂತನ ಕಾರ್ಯಕ್ರಮದ ಮೂಲಕ ನನ್ನ ಭಾವುಕ ಹಾಗೂ ಸೂಕ್ಷ್ಮಮತಿ ನಟನೆಯ ಮಜಲನ್ನು ಕಾಣಲಿದ್ದಾರೆ. ಟೀವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಈಗ ಮುಗಿಬೀಳುವ ಅವಶ್ಯಕತೆ ಇಲ್ಲ. ಆದರೆ ನಾನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಮಲ್ಲಿಕಾ ತಮ್ಮ ಆಯ್ಕೆ ಕುರಿತು ತಿಳಿಸಿದ್ದಾರೆ.ಇದರೊಂದಿಗೆ ಸೂಕ್ತ ಬಾಳಸಂಗಾತಿಗಾಗಿಯೂ ಮಲ್ಲಿಕಾ ಹುಡುಕಾಟ ಆರಂಭಿಸಿದ್ದಾರಂತೆ. `ಇತರ ಹುಡುಗಿಯರಂತೆ ನಾನೂ ಸಂಗಾತಿಯ ಹುಡುಕಾಟದಲ್ಲಿದ್ದೀನಿ. ಒಂಟಿತನ ಕಾಡುತ್ತಿದೆ. ಮದುವೆಗಿಂತ ಹೆಚ್ಚಾಗಿ ಪ್ರೀತಿ ಮಾಡುವ ಮನಸ್ಸಾಗಿದೆ. ಹಣ, ಅಂತಸ್ತು ಹಾಗೂ ಐಶ್ವರ್ಯಕ್ಕಿಂತ ಜೀವನದಲ್ಲಿ ಮನಕ್ಕೊಪ್ಪುವ ಬಾಳಸಂಗಾತಿಯ ಅವಶ್ಯಕತೆ ಇದೆ' ಎಂದು 36ರ ಹರೆಯದ ಮಲ್ಲಿಕಾ ನುಡಿದಿದ್ದಾರೆ.

 

ಪ್ರತಿಕ್ರಿಯಿಸಿ (+)