ಮಲ್ಲೂರು: ಸಾವಯವ ಕೃಷಿ ಕ್ಷೇತ್ರೋತ್ಸವ

7

ಮಲ್ಲೂರು: ಸಾವಯವ ಕೃಷಿ ಕ್ಷೇತ್ರೋತ್ಸವ

Published:
Updated:
ಮಲ್ಲೂರು: ಸಾವಯವ ಕೃಷಿ ಕ್ಷೇತ್ರೋತ್ಸವ

ಹಾವೇರಿ: `ಬೆಳೆಗಳಿಗೆ ತಗುಲುವ ರೋಗಕ್ಕೆ ರಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳೇ ಕಾರಣ~ ಎಂದು ಬ್ಯಾಡಗಿ ತಾಲ್ಲೂಕಿನ ಮಲ್ಲೂರು ಗ್ರಾ.ಪಂ. ಅಧ್ಯಕ್ಷ ಶಂಕ್ರಪ್ಪ ಅಕ್ಕಿ ಹೇಳಿದರು.ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಲ್ಲೂರು ಗ್ರಾಮದ ಗ್ರಾ.ಪಂ. ಹಾಗೂ ನವಭಾರತ ಫರ್ಟಿಲೈಜರ್ಸ್‌ ಆಶ್ರಯ ದಲ್ಲಿ ಬಸನಗೌಡ ಪಾಟೀಲ ಇವರ ತೋಟದಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು.  ರಸಾಯನಿಕಗಳು ರೈತನ ಶತ್ರು ವಿದ್ದಂತೆ ಅವುಗಳ ಬಳಕೆಯನ್ನು ಕಡಿಮೆ ಗೊಳಿಸದಿದ್ದರೆ ಉಳಿಗಾಲವಿಲ್ಲ. ಬಸನಗೌಡ ಅವರು ಜೈವಿಕ ಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಉಪಯೋಗಿಸಿ ಉತ್ತಮ ಇಳುವರಿ ಪಡೆದಿದ್ದು, ರೈತರು ಸಾವಯವ ಕೃಷಿ ಕೈಗೊಂಡು ಭೂಮಿಯ ಸತ್ವವನ್ನು ಉಳಿಸುವಂತೆ ಸಲಹೆ ನೀಡಿದರು.ನವ ಭಾರತ ಫರ್ಟಿಲೈಜರ್ಸ್‌ ಕಂಪೆನಿಯ ವಿಭಾಗೀಯ ವ್ಯವಸ್ಥಾಪಕ ಶಿವಲಿಂಗಪ್ಪ ಮಾತನಾಡಿ, ಕಂಪೆನಿ ಯಿಂದ ಜೈವಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶಕಗಳು ಸಂಪೂರ್ಣ ಸಾವ ಯವದಿಂದ ಕೂಡಿದೆ. ಬೆಳೆಗಳ ಬೆಳವಣಿಗೆಗೆ ಸಹಾಯಕಾರಿ ಆಗಲಿವೆ ಎಂದು ತಿಳಿಸಿದರು. ಕಂಪೆನಿಯ ಉತ್ಪನ್ನ ಗಳನ್ನು ಉಪಯೋಗಿಸಿ ರೈತರು ಉತ್ತಮ ಇಳುವರಿ ಪಡೆಯುವಂತೆ ಸಲಹೆ ನೀಡಿದರು. ಕೃಷಿ ಅಧಿಕಾರಿ ಚಿದಾನಂದ ಹಾಗೂ ನಿವೃತ್ತ ಶಿಕ್ಷಕ ಬಿ.ಎಂ.ಹುಡೆದ ಅವರು ಸಾವಯವ ಕೃಷಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕ್ಷೇತ್ರೋತ್ಸವದಲ್ಲಿ ಗ್ರಾಮಸ್ಥರಾದ ಗಣೇಶ ವಡಳ್ಳಿ, ಪ್ರಭು ಹೊಂಬರಡಿ, ಸಿದ್ದಪ್ಪ ಕಾಟಕಡ, ಮಾಲತೇಶ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry