ಮಲ ಮೊಮ್ಮಗಳ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ

7

ಮಲ ಮೊಮ್ಮಗಳ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ

Published:
Updated:

ಮುಂಬೈ (ಪಿಟಿಐ): ಮಲ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ 60 ವರ್ಷದ ವ್ಯಕ್ತಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಧ್ಯ ಮಹಾರಾಷ್ಟ್ರದ ಬುಲ್ದಾನಾದ ಹರಿ ಗನಿ ಇಂಗ್ಲೆ (60) ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ. ಈತ ಮುಂಬೈನ ಹೊರವಲಯದ ಮನ್‌ಖುರ್ದ್ ಪ್ರದೇಶದಲ್ಲಿ ಮಗನೊಂದಿಗೆ ವಾಸಿಸುತ್ತಿದ್ದಾನೆ.ಡಿಸೆಂಬರ್ 2011 ರಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದ್ಯದ ಅಮಲಿನಲ್ಲಿ ಮಲ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಎಚ್ಚರಿಸಿದ್ದ ಎನ್ನಲಾಗಿದೆ.ಇದರಿಂದ ಹೆದರಿದ ಬಾಲಕಿ ಚಿಕ್ಕಮ್ಮನ ಮನೆಗೆ ಹೋಗ್ದ್ದಿದು ಯಾರಿಗೂ ಹೇಳಿರಲಿಲ್ಲ.  ನಂತರ ನಡೆದ ಯಾವುದೋ ಸಣ್ಣ ವಿಷಯದ ಜಗಳದಲ್ಲಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಳು.ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಡಪಟ್ಟಿತ್ತು. ಸರ್ಕಾರಿ ವಕೀಲೆ ನೀಲಿಮಾ ಕಸ್ತೂರೆ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ನಂತರ ನಡೆದ ವಿಚಾರಣೆಯಲ್ಲಿ ಇಂಗ್ಲೆ ತನ್ನ ಮಲ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿರುವುದು ದೃಡಪಟ್ಟಿದ್ದು, ನ್ಯಾಯಾಲಯ ಹತ್ತು ಸಾವಿರ ರೂಪಾಯಿ ದಂಡ ಹಾಗೂ ಹತ್ತು ವರ್ಷ ಶಿಕ್ಷೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry