ಮಳವಳ್ಳಿ: ಕಬ್ಬು ಕಟಾವು ಯಂತ್ರ ಪ್ರಾತ್ಯಕ್ಷಿಕೆ

7

ಮಳವಳ್ಳಿ: ಕಬ್ಬು ಕಟಾವು ಯಂತ್ರ ಪ್ರಾತ್ಯಕ್ಷಿಕೆ

Published:
Updated:

ಮಳವಳ್ಳಿ: ಪಟ್ಟಣದ ಹೊರವಲಯದಲ್ಲಿರುವ ರೈತ ಎಂ.ಬಿ.ಗೌಡರ ಜಮೀನಿನಲ್ಲಿ ಕಬ್ಬು ಕಟಾವು ಪ್ರಾತ್ಯಕ್ಷಿಕೆಯನ್ನು ಭಾನುವಾರ ನಡೆಸಲಾಯಿತು.ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಷುಗರ್ಸ್‌ ವತಿಯಿಂದ ತಮಿಳುನಾಡಿನಿಂದ ತರಿಸಿದ್ದ ಯಂತ್ರದಲ್ಲಿ ಕಬ್ಬು ಕಟಾವು ಮಾಡಲಾಯಿತು.ಚಾಮುಂಡೇಶ್ವರಿ ಷುಗರ್ಸ್‌ನ ಸಹಾಯಕ ವ್ಯವಸ್ಥಾಪಕ ಚಂದ್ರೇಗೌಡ ಅವರು ಮಾತನಾಡಿ, ಕಾರ್ಮಿಕರು ಒಂದು ದಿನದಲ್ಲಿ ಒಂದು ಲಾರಿ ತುಂಬುವಷ್ಟು ಕಟಾವು ಮಾಡಬಹುದು. ಆದರೆ ಈ ಯಂತ್ರ 300 ಟನ್ ಕಟಾವು ಮಾಡುವುದರ ಜೊತೆಗೆ ಕಬ್ಬನ್ನು ಕತ್ತರಿಸಿ ಟ್ರ್ಯಾಕ್ಟರ್‌ಗೆ ತುಂಬುತ್ತದೆ. ಉಳಿದ  ಭಾಗವನ್ನು ಸುಡುವ ಬದಲು ಗೊಬ್ಬರವಾಗಿ ಉಪಯೋಗಿಸಿಕೊಳ್ಳಬಹುದು ಎಂದರು. ಒಂದು ಟನ್ ಕಬ್ಬು ಕತ್ತರಿಸಲು ರೂ.500 ನಿಗದಿಗೊಳಿಸಲಾಗಿದೆ. ಯಂತ್ರದ ಮೂಲಕ ಕತ್ತರಿಸಿದ ತಕ್ಷಣವೇ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತದೆ.ಇದರಿಂದ ಕಾಯಬೇಕಾದ ಅನಿವಾರ್ಯತೆ ಇಲ್ಲ. ವೆಚ್ಚವು ಕಡಿಮೆ ಎಂದರು. ಜಮೀನಿನ ಮಾಲೀಕ ಎಂ.ಬಿ.ಗೌಡ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಜಯಣ್ಣ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry