ಸೋಮವಾರ, ಏಪ್ರಿಲ್ 19, 2021
25 °C

ಮಳಿಗೆಗಳಿಂದ ಅಧಿಕ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ನಗರಸಭೆಯ ಆದಾಯ ಹೆಚ್ಚುವ ಜತೆಗೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.ನಗರಸಭೆ ಆವರಣದಲ್ಲಿ ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.ಅಧಿವೇಶನದಲ್ಲಿ ತಾಲ್ಲೂಕಿಗೆ ಹೆಚ್ಚಿನ ಅನುದಾನ ಪಡೆಯಲು ವಿವಿಧ ಕಾಮಗಾರಿಗಳ ವಿಷಯ ಮಂಡಿಸುತ್ತೇನೆ. ದೇವಸ್ಥಾನ ರಸ್ತೆಯ ವಿಸ್ತರಣೆ ಕಾರ್ಯ ಪ್ರಾರಂಭಗೊಂಡು ಸುಮಾರು ಎರಡು ವರ್ಷಗಳು ಕಳೆದಿವೆ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಚರಂಡಿ ಮತ್ತು ಬೀದಿದೀಪದ ಕಾಮಗಾರಿ ಸ್ಥಗಿತಗೊಂಡಿದೆ.

 

ಇದರಿಂದಾಗಿ ಸ್ಥಳಿಯ ನಿವಾಸಿಗಳಿಗೆ ಹಾಗೂ ಯಾತ್ರಾರ್ಥಿಗಳಿಗೆ ತೊಂದರೆಯಾಗಿದೆ. ಕಟ್ಟಡಗಳ ತೆರವಿಗೆ ತಡೆಯಾಜ್ಞೆ ತಂದಿದ್ದ ಸ್ಥಳಿಯ ನಿವಾಸಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅವರೂ ಸಹಕಾರ ನೀಡಲು ಒಪ್ಪಿದ್ದಾರೆ. ಆದಷ್ಟು ಬೇಗನೇ ಚರಂಡಿ ಮತ್ತು ಬೀದಿದೀಪದ ವ್ಯವಸ್ಥೆ ಮಾಡಿರಿ ಎಂದರು.ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವರ್ಷಾಂತ್ಯದ ಒಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಪೌರಾಯುಕ್ತರು ಹಾಗೂ ಎಇಇ ಅವರು ನಿಗಾವಹಿಸಬೇಕು. ಮಿನಿ ವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಸಾರ್ವಜನಿಕ ಈಜುಕೊಳ, ತುಂಗಭದ್ರಾ ಸೇತುವೆ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗೆ ಇನ್ನಷ್ಟು ವೇಗದ ಅಗತ್ಯವಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ವಿಶ್ವನಾಥ ಭೂತೆ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ಎಲ್ಲಾ ನಗರಸಭೆ ಸದಸ್ಯರ ಸಹಕಾರ ಪಡೆಯುತ್ತಿದ್ದೇನೆ. ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿಯಲ್ಲಿ ಸುಮಾರು ್ಙ 43.55 ಲಕ್ಷ ವೆಚ್ಚದ ವಾಣಿಜ್ಯ ಮಳಿಗೆ ಕಾಮಗಾರಿಗೆ ಚಾಲನೆಗೊಂಡಿರುವುದು ಸಂತಸ ತಂದಿದೆ. ಇತರ ನಗರಗಳೊಂದಿಗೆ ತುಲನೆ ಮಾಡಿದಾಗ ಸ್ವಚ್ಛತೆಯಲ್ಲಿ ನಮ್ಮ ನಗರ ಪ್ರಥಮ ಸ್ಥಾನದಲ್ಲಿದೆ.ಕುಡಿಯುವ ನೀರಿಗೆ ಮೂರನೇ ಹಂತದ ಕಾಮಗಾರಿಗೆ ಶಾಸಕರ ಸಹಕಾರದ ಅಗತ್ಯವಿದೆ. ಉತ್ತಮ ಗುಣಮಟ್ಟ ಪರಿಕ್ಷೀಸುವುದು ಅಧಿಕಾರಿಗಳ ಕರ್ತವ್ಯ. ಕಾಮಗಾರಿಗಳ ಗುಣಮಟ್ಟ ಕುಸಿಯದಂತೆ ಕಾರ್ಯ ನಿರ್ವಹಿಸುವುದು ಗುತ್ತಿಗೆದಾರರ ಜವಾಬ್ದಾರಿ ಎಂಬುದನ್ನು ಗುತ್ತಿಗೆದಾರರು ಮರೆಯಬಾರದು ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕೊಟ್ರೇಶ್, ಸದಸ್ಯರಾದ  ಡಿ. ಹೇಮಂತರಾಜ್, ಎ. ವಾಮನಮೂರ್ತಿ, ಹಂಚಿನ ನಾಗಣ್ಣ, ರಮೇಶ ಮೆಹರ‌್ವಾಡೆ, ಕೆ. ಮರಿದೇವ್, ಬಿ.ಆರ್. ಸುರೇಶ್, ಹಾಜಿ  ಅಲಿಖಾನ್, ಮೀರಾಭಟ್, ನಗೀನಾ ಸುಭಾನ್, ಬಿ. ಆನಂದಕುಮಾರ, ಪಿ. ಶಾಮಣ್ಣ, ಪೌರಾಯುಕ್ತ ಎಂ.ಕೆ. ನಲವಡಿ, ಎಇಇ ಮಹಮದ್‌ಗೌಸ್, ಸಹಾಯಕ ಎಂಜಿನಿಯರ್ ಎಂ.ಎನ್,. ದಳವಾಯಿ, ಕಿರಿಯ ಎಂಜಿನಿಯರ್‌ಗಳಾದ ಸಿ.ಬಿ. ಮಾಲತೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.