ಸೋಮವಾರ, ಜೂನ್ 21, 2021
26 °C

ಮಳಿಗೆಗೆ ಮಲಿನ ನೀರು: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಟ್ಟಡ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳನ್ನು ಗಟಾರಕ್ಕೆ ಹಾಕಿದ್ದರಿಂದ ಮಲಿನ ನೀರು ಉಕ್ಕಿ ಹರಿದು ಮಳಿಗೆಗಳು ಹಾಗೂ ಮನೆಗೆ ನುಗ್ಗುತ್ತಿರುವ ಪ್ರಸಂಗ ವಿಜಯ ನಗರದ ಸೇನಾ ಕಾಂಪ್ಲೆಕ್ಸ್ ಬಳಿ ಕೆಲವು ದಿನಗಳಿಂದ ನಡೆಯುತ್ತಿದ್ದು ಇದಕ್ಕೆ ಈ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೇನಾ ಕಾಂಪ್ಲೆಕ್ಸ್‌ನ ಹಿಂಭಾಗ ತೆಗ್ಗು ಪ್ರದೇಶವಾಗಿದ್ದು ಇಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸಮೀಪದಲ್ಲೇ ಇರುವ ಖಾಲಿ ಜಾಗದಲ್ಲಿ ಮಣ್ಣು ಹಾಕುವುದಕ್ಕಾಗಿ ಗಟಾರವನ್ನು ಮುಚ್ಚಿ ಲಾರಿ ಸಾಗಲು ಜಾಗ ಮಾಡಲಾಗಿದೆ. ಇನ್ನೊಂದು ಕಡೆ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳನ್ನು ಗಟಾರಕ್ಕೆ ಹಾಕಲಾಗಿದೆ.ಇದರಿಂದಾಗಿ ಗಟಾರದ ನೀರು ಕಟ್ಟಿ ನಿಂತು ಮೇಲ್ಭಾಗದಲ್ಲಿರುವ ಮನೆಗಳಿಗೆ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ ನುಗ್ಗುತ್ತಿದೆ.ಸುಮಾರು ಒಂದು ವಾರದಿಂದ ಈ ಸಮಸ್ಯೆ ಕಾಡುತ್ತಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಾರ್ವಜನಿಕರು ದೂರಿದರು.ಗುರುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿರುವ ಸೇನಾ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿರುವ ಮಳಿಗೆಗಳಿಗೆ ನೀರು ನುಗ್ಗಿದ್ದು ಇದರ ಸಮೀಪದ ಮನೆಗಳಲ್ಲಿ ವಾಸ ಮಾಡುತ್ತಿರುವವರೇ ನೀರನ್ನು ಹೊರ ಹಾಕಬೇಕಾಯಿತು.`ಇದು ಹೊಸ ಗಟಾರ. ಕೇವಲ ಆರು ತಿಂಗಳ ಹಿಂದೆಯಷ್ಟೇ ಇದನ್ನು ನಿರ್ಮಿಸಲಾಗಿತ್ತು. ಆದರೂ ಈಗ ಮಣ್ಣು ಬಿದ್ದಿರುವ ಕಾರಣ ಗಟಾರ ಮುಚ್ಚಿ ತೊಂದರೆಯಾಗಿದೆ. ಸಂಬಂಧಪಟ್ಟವರಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ~ ಎಂದು ಜಿ.ಜಿ. ಜಿತೂರಿ, ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.